ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ತಾಯಿ ಆತ್ಮಹತ್ಯೆ

sucide
Published on

ಮೂವರು ಮಕ್ಕಳೊಂದಿಗೆ ನದಿಗೆ ಹಾರಿ ತಾಯಿ ಆತ್ಮಹತ್ಯೆ

ರಾಯಬಾಗ: ಪತಿ ಕಿರುಕುಳಕ್ಕೆ ಬೇಸತ್ತು ಮೂವರು ಮಕ್ಕಳೊಂದಿಗೆ ಕೃಷ್ಣಾ ನದಿಗೆ ಹಾರಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಬುಧವಾರ ನಸುಕಿನ ಜಾವ ತಾಲೂಕಿನ ಚಿಂಚಲಿ ಪಟ್ಟಣದಲ್ಲಿ ಜರುಗಿದೆ.

ತಾಲೂಕಿನ ಚಿಂಚಲಿ ಪಟ್ಟಣದ ಶಾರದಾ ಅಶೋಕ ಢಾಲೆ(32), ಅಮೃತಾ ಢಾಲೆ(14), ಅನೂಷಾ ಢಾಲೆ(10), ಆದರ್ಶ ಢಾಲೆ (8) ಮೃತರು.

ಶಾರದಾಳ ಪತಿ ಅಶೋಕ ಢಾಲೆ(45) ನಿತ್ಯ ಕುಡಿದು ಬಂದು ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತು ಶಾರದಾ ತನ್ನ ಮೂರು ಮಕ್ಕಳೊಂದಿಗೆ ಕೃಷ್ಣಾನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನದಿಯಲ್ಲಿ ನಿತ್ಯ ಮೀನುಗಾರಿಕೆ ಮಾಡುತ್ತಿದ್ದ ಕೆಲವರು ನದಿ ಪಕ್ಕದಲ್ಲಿ ಒಂದು ಮಗು ಬಿದ್ದು ಒದ್ದಾಡುತ್ತಿರುವುದನ್ನು ಕಂಡು ಅಲ್ಲಿಗೆ ಹೋಗಿದ್ದಾರೆ. ಈ ವೇಳೆ ಪಕ್ಕದಲ್ಲೇ ಇತರರ ಚಪ್ಪಲಿಗಳು ನೋಡಿ ಮೀನುಗಾರರೇ ಶೋಧ ನಡೆಸಿ ಮೂವರ ಮೃತದೇಹ ಹೊರ ತೆಗೆದಿದ್ದಾರೆ. ನಂತರ ಸ್ಥಳಕ್ಕೆ ಕುಡಚಿ ಪೊಲೀಸ್ ಠಾಣೆ ಅಧಿಕಾರಿ ಬಂದು ಪರಿಶೀಲನೆ ನಡೆಸಿದರು. ಶಾರದಾ ಕುಟುಂಬಸ್ಥರು ಪತಿ ಅಶೋಕ ಢಾಲೆ ವಿರುದ್ಧ ಶಾರದಾ ಕುಟುಂಬಸ್ಥರು ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net