ಕೆಂಭಾವಿ: ಹುಣಸಗಿ ಪಟ್ಟಣದಲ್ಲಿ ಜೂ.೧ರಂದು ವಿಶ್ವಗುರು ಬಸವಣ್ಣ, ಹೇಮರಡ್ಡಿ ಮಲ್ಲಮ್ಮ ಮತ್ತು ಅಕ್ಕಮಹಾದೇವಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಮಲ್ಲಿಕಾರ್ಜುನರೆಡ್ಡಿ ಅಮ್ಮಾಪುರ ತಿಳಿಸಿದ್ದಾರೆ.
ಈ ಕುರಿತು ಪಟ್ಟಣದ ಹಿರೇಮಠದಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿದ ಅವರು, ಈ ಮೂವರು ಮಹಾನ್ ದಾರ್ಶನಿಕರು ವೀರಶೈವ ಸಮಾಜಕ್ಕೆ ತಮ್ಮದೆಯಾದ ಕೊಡುಗೆ ನೀಡುವ ಮೂಲಕ ಸಮಾಜವನ್ನು ಒಗ್ಗೀಡಲು ಶ್ರಮಿಸಿದ್ದಾರೆ.
ಹೀಗಾಗಿ ಅವರ ಜಯಂತಿಯನ್ನು ಜೂ.೧ರಂದು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸಿ ಜಯಂತಿ ಕರ‍್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
‘ಹಿರಿಯ ಮುಖಂಡ ಶಂಕ್ರಣ್ಣ ವಣಿಕ್ಯಾಳ ಮಾತನಾಡಿದರು. ಹಿರೇಮಠದ ಶ್ರೀ ಚನ್ನಬಸವ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ಬಸನಗೌಡ ಚಿಂಚೋಳಿ, ಶರಣಪ್ಪ ಬಂಡೋಳಿ, ಡಿ.ಸಿ.ಪಾಟೀಲ್, ಪ್ರಭುಗೌಡ ಹರನಾಳ, ಚೆನ್ನಯ್ಯಸ್ವಾಮಿ ಹಿರೇಮಠ, ಮಹಿಪಾಲರೆಡ್ಡಿ ಡಿಗ್ಗಾವಿ, ರಮೇಶ ಸೊನ್ನದ, ಡಾ.ಕಿರಣ ಜಕರೆಡ್ಡಿ, ಸಿದ್ದನಗೌಡ ಬಿರಾದಾರ, ಮಹಾಂತಗೌಡ ನಗನೂರ ಇತರರಿದ್ದರು. ಡಾ.ಯಂಕನಗೌಡ ಪಾಟೀಲ್ ನಿರೂಪಣೆ ಮಾಡಿದರು. ಶಂಕರಗೌಡ ಸ್ವಾಗತಿಸಿದರು.
ಅಖಂಡ ಕರ್ನಾಟಕ ವೀರಶೈವ ಲಿಂಗಾಯತ ಸಮಾಜದದಿಂದ ಜೂ.೧ರಂದು ಹುಣಸಗಿಯಲ್ಲಿ ಹಮ್ಮಿಕೊಂಡ ವಿಶ್ವಗುರು ಬಸವಣ್ಣ, ಹೇಮರೆಡ್ಡಿ ಮಲ್ಲಮ್ಮ ಮತ್ತು ಕ್ಕಮಹಾದೇವಿ ಜಯಂತಿ ಮಹೋತ್ಸವದ ಭಿತ್ತಿಪತ್ರವನ್ನು ಕೆಂಭಾವಿ ಹಿರೇಮಠದಲ್ಲಿ ಮಂಗಳವಾರ ಬಿಡುಗಡೆ ಮಾಡಲಾಯಿತು. ಶ್ರೀ ಚನ್ನಬಸವ ಶಿವಾಚಾರ್ಯರು, ಶಂಕ್ರಣ್ಣ ವಣಿಕ್ಯಾಳ, ಡಾ.ಕಿರಣ ಜಕರೆಡ್ಡಿ, ಡಿ.ಸಿ.ಪಾಟೀಲ್ ಇತರರಿದ್ದರು.