ಮೂವರು ದರೋಡೆಕೋರರ ಬಂಧನ.

IMG-20201024-WA0009
Published on

ವಿಜಯಪುರ: ಎನಕೌಂಟರ್ ಆಗಿರುವ ಭೀಮಾತೀರದ ಹಂತಕ ಧರ್ಮರಾಜ ಚಡಚಣನ ಸಂಬಂಧಿಕರೆಂದು ಹೇಳಿಕೊಂಡು ಹಾಗೂ ನೀವು ಮಹಿಳೆಯೊಬ್ಬಳ ಜತೆ ಅನೈತಿಕ ಸಂಬಂಧ ಹೊಂದಿದ್ದೀರಿ, ನಿಮಗೆ ಕೊಲೆ ಮಾಡುವುದಾಗಿ ಔಷಧಿ ಸಸಿ ಮಾರಾಟ ಮಾಡುವ ವ್ಯಾಪಾರಿಯೊಬ್ಬನಿಗೆ ಬೆದರಿಸಿದ್ದರು. ವ್ಯಾಪಾರಿಗೆ ಬ್ಲ್ಯಾಕ್ ಮೇಲ್ ಮಾಡಿ ಲಕ್ಷಾಂತರ ರೂ. ಬೇಡಿಕೆ ಇಟ್ಟಿದ್ದ ಮೂವರನ್ನು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಕನ್ನೂರ ಗ್ರಾಮದ ಮುರಿಗೆಪ್ಪ ಬೆಳ್ಳುಂಡಗಿ, ಬಸವರಾಜ ಬೆಳ್ಳುಂಡಗಿ ಹಾಗೂ ಮಖಣಾಪುರದ ದೇವೇಂದ್ರ ಒಡೆಯರ ಎಂದು ಗುರುತಿಸಲಾಗಿದೆ. ಮೂವರು ಆರೋಪಿಗಳು ವಿಜಯಪುರದ ಗಚ್ಚಿನಕಟ್ಟಿ ನಿವಾಸಿ ಅಪ್ಪಾಸಾಹೇಬ ಮಲ್ಲಿಕಾರ್ಜುನ ಬಗಡೆ ಎಂಬುವರಿಗೆ ಕರೆ ಮಾಡಿ, ತಮಗೆ ಔಷಧಿ ಸಸಿ ಬೇಕು ಎಂದು ಹೇಳಿ ಶಿರನಾಳ-ಬಬಲೇಶ್ವರ ರಸ್ತೆ ಕಡೆಗೆ ಕರೆಯಿಸಿದ್ದರು. ಆ ಬಳಿಕ ತಾವು ಭೀಮಾತೀರದ ಹಂತಕ ಧರ್ಮರಾ ಚಡಚಣನ ಸಂಬಂಧಿಕರು ಎಂದು ಹೇಳಿಕೊಂಡು ನಿಮ್ಮನ್ನು ಕೊಲೆ ಮಾಡುವುದಾಗಿ ಬೆದರಿಸಿ 1.20 ಲಕ್ಷ ರೂ. ಹಣದ ಬೇಡಿಕೆ ಇಟ್ಟು ಆ ವ್ಯಾಪಾರಿಯಿಂದ 1.37ಲಕ್ಷ ರೂ. ನಗದು ಹಾಗೂ ಒಂದು ಮೊಬೈಲ್ ಕಸಿದುಕೊಂಡು ಹೋಗಿದ್ದರು.

ಈ ಸಂಬಂಧ ಔಷಧಿ ವ್ಯಾಪಾರಿ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತಕ್ಷಣ ಕಾರ್ಯಾಚರಣೆ ಆರಂಭಿಸಿದ ವಿಶೇಷ ಪೊಲೀಸ್ ತಂಡ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತರಿಂದ ವ್ಯಾಪಾರಿಂದ ಬೆದರಿಸಿ ಸುಲಿಗೆ ಮಾಡಿದ್ದ 1.37ಲಕ್ಷ ರೂ. ನಗದು, ಮೊಬೈಲ್ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.

ವಿಶೇಷ ಪೊಲೀಸ್ ತಂಡದ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ವಿಜಯಪುರ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ ಬಹುಮಾನ ಘೋಷಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net