

ಕಲಬುರಗಿ: ಹಾಗರಗುಂಡಗಿ ಗ್ರಾಮದಲ್ಲಿ ನಡೆದ ಟ್ರಾ$್ಯಕ್ಟರ್ ಕಳ್ಳತನ ಪ್ರಕರಣದ ಬೆನ್ನತ್ತಿದ್ದ ರಹತಾಬಾದ್ ಪೊಲೀಸರು ಮೂವರು ಕಳ್ಳರನ್ನು ಬಂಧಿಸಿದ್ದು, ವಿವಿಧೆಡೆ ಕಳ್ಳತನ ಮಾಡಿದ ಮೂರು ಟ್ರಾ$್ಯಕ್ಟರ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಅಜಲಪುರ ತಾಲೂಕಿನ ಹಸರಗುಂಡಗಿಯ ರಿಯಾಜ್ ಪಟೇಲ್(೨೫), ರಹತಾಬಾದ್ ಗ್ರಾಮದ ರಾಜಶೇಖರ ಮಂದರವಾಡ(೨೦), ಬಂದರವಾಡ ಗ್ರಾಮದ ನಾಗರಾಜ ಬಾಲಮಾರ್ (೨೫) ಬಂಧಿತ ಆರೋಪಿಗಳು.
೨೦೨೫ ಮಾ.೧೪ರಂದು ಹಾಗರಗುಂಡಗಿಯಲ್ಲಿ ಗುಂಡಪ್ಪ ನಿಲೂರ ಅವರ ಟ್ರಾ$್ಯಕ್ಟರ್ ಜಮೀನಿನಲ್ಲಿದ್ದಾಗ ಕಳ್ಳತನ ಮಾಡಲಾಗಿತ್ತು. ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರಿಂದ ೧೧.೫೦ ಲಕ್ಷ ರೂ. ಮೌಲ್ಯದ ಮೂರು ಟ್ರಾ$್ಯಕ್ಟರ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಟ್ರಾ$್ಯಕ್ಟರ್ ಕಳ್ಳತನ ತನಿಖೆಯಲ್ಲಿ ಎಸಿಪಿ ಡಿ.ಜಿ.ರಾಜಣ್ಣ ನೇತೃತ್ವದಲ್ಲಿ ಪಿಐ ಮಲ್ಲಿಕರ‍್ಜುನ ಇಕ್ಕಳಗಿ, ಸಿಬ್ಬಂದಿ ಗಡ್ಡೆಪ್ಪ ಕೋರೆ, ತುಕಾರಾಮ, ಕಲ್ಯಾಣಕುಮಾರ, ಸಾಜೀದ್ಪಾಶಾ, ಆನಂದ, ಎಂ.ಆರ್.ಪಟೇಲ್, ಸಂಗೀತಾ ಕಲ್ಲನ ಅವರ ತಂಡ ಕರ‍್ಯಾಚರಣೆ ನಡೆಸಿ, ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಅಧಿಕಾರಿ, ಸಿಬ್ಬಂದಿ ಕರ‍್ಯಕ್ಕೆ ನಗರ ಪೊಲೀಸ್ ಆಯುಕ್ತ ಡಾ.ಶರಣಪ್ಪ ಎಸ್.ಡಿ. ಶ್ಲಾಘಿಸಿದ್ದಾರೆ.
ಸ್ಕ್ರಾಪ್ಗೆ, ರೈತರಿಗೆ ಮಾರಾಟಕ್ಕೆ ಯತ್ನ: ಕಳ್ಳತನ ಮಾಡಿದ ಟ್ರ್ಯಾಕ್ಟರ್ಗಳನ್ನು ಕಳ್ಳರು ಕಲಬುರಗಿ ನಗರದಲ್ಲಿ ಸ್ಕ್ರಾಪ್ ಮಾಡಲು ನೀಡಿದ್ದರು. ಅಲ್ಲದೇ ಇನ್ನೆರಡು ಟ್ರಾ$್ಯಕ್ಟರ್ಗಳನ್ನು ರೈತರಿಗೆ ಮಾರಾಟಕ್ಕೆ ಮುಂದಾಗಿದ್ದರು. ಮಾರಾಟದ ಮಾರುಕತೆ ಆಗಿತ್ತು. ವ್ಯಾಪಾರ ಕುದುರಿಸುವ ಮುನ್ನವೇ ಪೊಲೀಸರು ಕರ‍್ಯಾಚರಣೆ ನಡೆಸಿ, ಬಂಧಿಸಿದ್ದಾರೆ. ಒಂದು ಪ್ರಕರಣ ರಹತಾಬಾದ್ ಠಾಣೆ ವ್ಯಾಪ್ತಿಯ ಹಾಗರಗುಂಡಗಿಯಲ್ಲಿ, ಇನ್ನೆರಡು ಟ್ರಾ$್ಯಕ್ಟರ್ ಕಳ್ಳತನ ಪ್ರಕರಣ ಅಜಲಪುರ ತಾಲೂಕಿನ ದೇವಲಗಾಣಗಾಪುರ ಠಾಣೆ ವ್ಯಾಪ್ತಿಯ ಬಂದರವಾಡದಲ್ಲಿ ನಡೆದಿದ್ದವು. ಪ್ರಕರಣದ ಬೆನ್ನತ್ತಿದ್ದ ರಹತಾಬಾದ್ ಪೊಲೀಸರಿಗೆ ಅಜಲಪುರ ತಾಲೂಕಿನ ಚಿಣಮಗೇರಿ ಕ್ರಾಸ್ ಬಳಿ ಕಳ್ಳರನ್ನು ಅನುಮಾನದ ಮೇಲೆ ಬಂಧಿಸಿ, ವಿಚಾರಿಸಿದಾಗ ಕಳ್ಳತನ ಹೊರಬಂದಿದೆ ಎಂದು ಪೊಲೀಸರು ತಿಳಿಸಿದರು.