ಮೂವರು ಗಣ್ಯರಿಗೆ ಗೌಡಾ ಪ್ರದಾನ

06 yerriswamy 02
Published on

ಬಳ್ಳಾರಿ : ಸಮಾಜ ಸೇವಕ ಎಸ್.ಕೆ. ಮೋದಿ, ಶ್ರೀ ಚಂದ್ರಮೌಳೇಶ್ವರ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಮರಣೋತ್ತರ ಹಾಗೂ ನಟಿ ಉಮಾಶ್ರಿ ಅವರಿಗೆ ಇಲ್ಲಿನ ವಿಜಯನಗರ ಶ್ರೀ ಕೃಷ್ಣ ದೇವರಾಯ ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ಪ್ರಧಾನ ಮಾಡಿದೆ.
ವಿವಿಯಲ್ಲಿ ಶುಕ್ರವಾರ ಆಯೋಜಿಸಿದ್ದ 12ನೇ ಘಟಿಕೋತ್ಸವದಲ್ಲಿ ಉನ್ನತ ಶಿಕ್ಷಣ ಸಚಿವ ಎಂ. ಸಿ. ಸುಧಾಕರ ಹಾಗೂ ವಿವಿ ಕುಲಪತಿ ಪ್ರೊ. ಎಂ. ಮುನಿರಾಜು ಪ್ರದಾನ ಮಾಡಿದರು.
ಔದ್ಯೋಗಿಕ ರಸಾಯನ ಶಾಸ್ತ್ರದಲ್ಲಿ ನಗರದ ಕೌಲಬಜಾರ್ ನಿವಾಸಿ ಪಿ. ಉಮಾ, ಖನಿಜ ಸಂಸ್ಕರಣದಲ್ಲಿ ಸಂಡೂರು ತಾಲೂಕಿನ ಸೋವೆನಹಳ್ಳಿಯ ಕೆ.ಬಿ. ನಾಗರಾಜ, ವಾಣಿಜ್ಯಶಾಸ್ತ್ರದಲ್ಲಿ ಸಿರುಗುಪ್ಪ ತಾಲೂಕಿನ ಉಡೇಗೊಳ ಗ್ರಾಮದ ದೌಲತ್ ಬಾನು ಅವರಿಗೆ ತಲಾ ಮೂರು ಚಿನ್ನದ ಪದಕ ಪಡೆದರು. ಕನ್ನಡ ವಿಭಾಗದಲ್ಲಿ ಹೊಸಪೇಟೆ ತಾಲೂಕಿನ ವ್ಯಾಸನಹಳ್ಳಿ ನಿವಾಸಿ ಎ.ಕೆ. ಹುಲಿಗೆಮ್ಮ , ರಸಾಯನ ಶಾಸ್ತ್ರ ಬಳ್ಳಾರಿ ತಾಲೂಕಿನ ಕುಡುತಿನಿಯ ಎ. ಪ್ರಿಯಾಂಕ, ಭೌತಶಾಸ್ತ್ರ ದಲ್ಲಿ ಕೊಪ್ಪಳ ನಿವಾಸಿ ಪೂಜಾ ಹಿರೇಹಾಳ್, ಸಮಾಜಶಾಸ್ತ್ರದಲ್ಲಿ ಸಂಡೂರಿನ ಆಕಾಶ ಕ್ಯಾಂಪ್‌ನ ನಿವಾಸಿ ಸಾಲುಂಕೆ ಮಿತ್ರಾ, ಬಿಎಸ್‌ಸಿ ಪದವಿಯಲ್ಲಿ ನಗರದ ನಿವಾಸಿ ಬಿ. ಪಿ. ಶ್ರೇಯಾ ತಲಾ ಎರಡು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಒಟ್ಟಾರೆ ಘಟಿಕೋತ್ಸವದಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ವಿವಿಧ ವಿಭಾಗಗಳ 42 ವಿದ್ಯಾರ್ಥಿಗಳು 53 ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡರು. 36 ಸಂಶೋಧನಾರ್ಥಿಗಳು ಡಾಕ್ಟರೇಟ್ ಪದವಿ ಹಾಗೂ ಎಲ್ಲ ವಿಭಾಗಗಳ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯಿಂದ 125 ವಿದ್ಯಾರ್ಥಿಗಳು ರ‌್ಯಾಂಕ್ ಪ್ರಮಾಣ ಪತ್ರ ಪಡೆದರು.
ಪ್ರಮುಖರಾದ ಕುಲಸಚಿವರಾದ ಎಸ್.ಎನ್. ರುದ್ರೇಶ್, ರಮೇಶ ಓಲೇಕಾರ್, ಪ್ರೊ. ಎಸ್. ಎಂ. ಶಿವಪ್ರಸಾದ್ ಇದ್ದರು.

ಎರಡು ಚಿನ್ನ : ಸಂಡೂರು ತಾಲೂಕಿನ ನಂದಿಹಳ್ಳಿ ಕೇಂದ್ರದ ಸಮಾಜ ಶಾಸ್ತ್ರದ ವಿಭಾಗದ ಸಾಲುಂಕೆ ಮಿತ್ರಾ ಎರಡು ಚಿನ್ನದ ಪದಕ ಪಡೆದಿದ್ದಾರೆ. ಅಲ್ಲದೆ, ಇವರಿಗೆ ಪಿಯುಸಿ ವ್ಯಾಸಂಗದ ವೇಳೆಯಲ್ಲಿಯೇ ಮದುವೆಯಾಗಿತ್ತು. ಆದರೆ, ಗಂಡನ ಹಾಗೂ ಅತ್ತೆಯ ಸಹಕಾರದಿಂದ ಈ ಸಾಧನೆಗೈದಿದ್ದಾರೆ. ಉನ್ನತ ವ್ಯಾಸಂಗ ಮಾಡಿ ಕುಟುಂಬದ ಆಸೆಯಂತೆ ಸರ್ಕಾರಿ ನೌಕರಿ ಪಡೆಯುವೆ ಗುರಿಯಿದೆ ಎಂದು ಸಾಲುಂಕೆ ಮಿತ್ರಾ ವಿಜಯವಾಣಿಯೊಂದಿಗೆ ಸಂತೋಷ ಹಂಚಿಕೊಂಡರು.

ಕೋಟ್… ಕುಟುಂಬ ಹಾಗೂ ನನ್ನ ಹಲವು ವರ್ಷಗಳ ಕನಸು ಈಡೇರಿದೆ. ಇನ್ನೂ ಮುಂದಿನ ದಿನಗಳಲ್ಲಿ ಶ್ರಮವಹಿಸಿ, ಕುಟುಂಬ ಹಾಗೂ ದೇಶಕ್ಕೆ ಗೌರವ ತರುವಂತಹ ಸಾಧನೆ ಮಾಡುವೆ.

  • ದೌಲತ್ ಬಾನು, ಮೂರು ಚಿನ್ನದ ಪದಕ, ವಾಣಿಜ್ಯ ಶಾಸ್ತ್ರ, ಬಳ್ಳಾರಿ.

ಕೋಟ್.. ಈ ಭಾಗದ ಉತ್ಕಷ್ಟ ಕಬ್ಬಿಣ ಅದಿರು ಸಂಪತ್ತು ಹೊಂದಿದ್ದು, ಅದಕ್ಕೆ ಸಂಬಂಧಿಸಿದ ಕಾರ್ಖಾನೆಗಳಲ್ಲಿ ಉದ್ಯೋಗ ದೊರೆಯುವಂತಹ ಕೌಶಲ್ಯದ ತರಬೇತಿ ಕೋರ್ಸ್ ತೆರೆಯಲು ಕ್ರಮವಹಿಸಿ.

  • ಡಾ. ಎಂ.ಸಿ. ಸುಧಾಕರ್, ಉನ್ನತ ಶಿಕ್ಷಣ ಸಚಿವ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net