ಮೂವರು ಕೊಲೆ ಆರೋಪಿಗಳ ಬಂಧನ

02
Published on

ಅಥಣಿ: ನಾಲ್ಕು ತಿಂಗಳ ಹಿಂದೆ ನಡೆದಿದ್ದ ಕೊಲೆ ಪ್ರಕರಣ ಭೇದಿಸಿದ ಪೊಲೀಸರು ಶನಿವಾರ ಮೂವರು ಆರೋಪಿಗಳನ್ನು ಬಂಧಿಸಿ ದ್ದಾರೆ. ಗೂಗವಾಡ ಗ್ರಾಮದ ಹುಚ್ಚಪ್ಪ ಗುಂಡೇವಾಡಿ, ಅಂಕುಶ ಸೂರ್ಯವಂಶಿ ಮತ್ತು ಚಮಕೇರಿ ಗ್ರಾಮದ ಮುತ್ತಪ್ಪ ತೇರಿ ಬಂ-ಧಿತ ಆರೋಪಿಗಳು.

ಮಲ್ಲಪ್ಪ ಭೀಮಪ್ಪ ಗೂಗವಾಡ (34) ಕೊಲೆಗೀಡಾದ ವ್ಯಕ್ತಿ. ಪಟ್ಟಣದ ಪೊಲೀಸ್​ ಠಾಣೆಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಡಾ. ಸಂಜೀವ ಪಾಟೀಲ ಅವರು ಈ ಕುರಿತು ಮಾಹಿತಿ ನೀಡಿದರು. ಮಾಚ್​.26ರಂದು ಜತ್ತ ರಸ್ತೆಯಲ್ಲಿ ಅಪಘಾತವಾಗಿ ಮಲ್ಲಪ್ಪ ಭೀಮಪ್ಪ ಗೂಗವಾಡ (34) ಸ್ಥಳದಲ್ಲೇ ಮೃತಪಟ್ಟಿದ್ದ. ಈ ಕುರಿತು ಮೃತನ ತಂದೆ ಭೀಮಪ್ಪ ಮಗದುಮ್ಮ ಗೂಗವಾಡ ದೂರು ನೀಡಿದ್ದರು. ಇದರಿಂದ ತನಿಖೆ ಆರಂಭಿಸಿದ ಪೊಲೀಸರು ಮೃತ ವ್ಯಕ್ತಿ ಮಲ್ಲಪ್ಪನ ಕುತ್ತಿಗೆ ಮೇಲೆ ಚೂರಿ ಇರಿತದ ಗುರುತು ಪತ್ತೆ ಹಚ್ಚಿದ್ದರು. ಇದು ಕೊಲೆ ಎಂದು ಅನುಮಾನಗೊಂಡು ಪ್ರಕರಣ ಬೆನ್ನತ್ತಿ ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.

ಜೀಪ್​ ಚಾಲಕನಾಗಿ ಅಥಣಿಯಿಂದ ಪ್ರತಿದಿನ ಜತ್ತಗೆ ಸೀಟ್​ ಸರ್ವಿಸ್​ ಮಾಡುತ್ತಿದ್ದ ಮಲ್ಲಪನ್ನು ವಾಹನ ಅಪಘಾತದಂತೆ ಬಿಂಬಿಸಿ ಕೊಲೆ ಮಾಡಲಾಗಿದೆ ಎಂದು ತನಿಖೆ ವೇಳೆ ತಿಳಿದು ಬಂದಿದೆ. ಕೊಲೆಗೆ ಅಕ್ರಮ ಸಂಬಂಧವೇ ಕಾರಣ ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಎಸ್​ಪಿ ತಿಳಿಸಿದ್ದಾರೆ.

ಪ್ರಕರಣ ಭೇದಿಸಿದ ಸಿಬ್ಬಂದಿಗೆ ಬಹುಮಾನ ಮತ್ತು ಪ್ರಮಾಣಪತ್ರ ವಿತರಿಸಲಾಗುವುದು ಎಂದರು. ಡಿವೈಎಸ್​ಪಿ ಎಸ್​.ವಿ.ಗಿರೀಶ, ಸಿಪಿಐ ಶಂಕರಗೌಡ ಬಸನಗೌಡರ, ಕುಮಾರ ಹಾಡಕಾರ,ವೈ.ವೈ. ರಾಮೋಜಿ, ಪಿ.ಬಿ. ನಾಯಿಕ, ಎಂ.ಬಿ. ದೊಡಮನಿ, ಆರ್​.ಎ.ಕಮತೆ, ಪ್ರಶಾಂತ ಆಲಮಟ್ಟಿ, ಎಂ.ಎಂ.ಖೋತ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net