ಮೂವರು ಕಳ್ಳರ ಸೆರೆ -6.50 ಲಕ್ಷ ರೂ. ಮೌಲ್ಯದ ಶ್ರೀಗಂಧ ವಶ

IMG-20230903-WA0044.jpg
Published on

ದಾವಣಗೆರೆ: ಚನ್ನಗಿರಿ ಉಪ ವಿಭಾಗದ ವ್ಯಾಪ್ತಿಯಲ್ಲಿ, ಶ್ರೀಗಂಧ ಕಳ್ಳತನದ ಏಳು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಚನ್ನಗಿರಿ ತಾಲೂಕಿನ ಗಾಳಿಹಳ್ಳಿ ಗ್ರಾಮದ ಇಸ್ಮಾಯಿಲ್, ಭದ್ರಾವತಿ ತಾಲೂಕು ದಡಂಗಟ್ಟೆ ಗ್ರಾಮದ ಜಬೀವುಲ್ಲಾ, ಶಿವಮೊಗ್ಗದ ಸೂಳೆಬೈಲು ನಿವಾಸಿ ಹೈದರ್‌ಖಾನ್ ಬಂಧಿತರು.

6.50 ಲಕ್ಷ ರೂ. ಮೌಲ್ಯದ 61 ಕೆಜಿ ತೂಕದ ಶ್ರೀಗಂಧ ಮರದ ತುಂಡುಗಳು, ಕೃತ್ಯಕ್ಕೆ ಬಳಸಿದ ಒಂದು ಬೈಕ್, ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಆರೋಪಿಗಳು ಚನ್ನಗಿರಿ ಠಾಣೆಯ 3, ನ್ಯಾಮತಿ ಠಾಣೆಯ 2, ಬಸವಾಪಟ್ಟಣ ಠಾಣೆಯ 1, ಸಂತೆಬೆನ್ನೂರು ಠಾಣೆ ವ್ಯಾಪ್ತಿಯ ಒಂದು ಪ್ರಕರಣದಲ್ಲಿ ಭಾಗಿಯಾಗಿದ್ದರು.

ಸಿಪಿಐ ಸಂತೆಬೆನ್ನೂರು ವೃತ್ತದ ಸಿಪಿಐ ಲಿಂಗನಗೌಡ ನೆಗಳೂರು ನೇತೃತ್ವದಲ್ಲಿ ಪಿಎಸ್‌ಐ ರೂಪಾ ತೆಂಬದ್ ಹಾಗೂ ಅವರ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದು, ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net