

ಮೂವರು ಕಳ್ಳರ ಬಂಧನ
ಬೆಳಗಾವಿ: ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರ ಚಿನ್ನದ ಆಭರಣ ಕಳ್ಳತನ ಮಾಡಿದ್ದ ,ಮೂವರು ಆರೋಪಿಗಳನ್ನು ಮಾರ್ಕೆಟ್ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಕಳೆದ ಮಾ.15 ರಂದು ನೆಹರು ನಗರದ ನಿವಾಸಿ ಕಾಂಚನಾ ಗೌಡರ ಅವರ ಚಿನ್ನದ ಆಭರಣಗಳು ಕೇಂದ್ರ ಬಸ್ ನಿಲ್ದಾಣದಲ್ಲಿ ಕಳ್ಳತನವಾಗಿದ್ದು,ಹಿನ್ನೆಲೆ ದೂರು ದಾಖಲಾಗಿತ್ತು.
ತನಿಖೆ ಕೈಗೊಂಡ ಪೊಲೀಸರು ಮೂವರು ಆರೋಪಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಗರದ ಗ್ಯಾಂಗವಾಡಿ ನಿವಾಸಿಗಳಾದ ಅನಿತಾ ನಿತಿನ ಚೌಗಲೆ(೪೦),ಸಿಂಪಲ ಶ್ರೀಕಾಂತ ಲೋಂಡೆ(೩೫),ಮತ್ತು ನಿಶಾ ಶಂಕಲ ಲೋಂಡೆ ಬಂಧಿತರು.
ಬಂಂಧಿತರಿಂದ ,12,72,700 ರೂ.ಮೌಲ್ಯದ
143 ಗ್ರಾಂ. ಚಿನ್ನದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.