ಮೂವರು ಕಳ್ಳರ ಬಂಧನ

3kglphoto2....
Published on

ಕೊಳ್ಳೇಗಾಲ: ಪಟ್ಟಣದ ಬಸವೇಶ್ವರನಗರದ ಮನೆಯೊಂದರಲ್ಲಿ 495 ಗ್ರಾಂ ಚಿನ್ನಾಭರಣ, 50 ಸಾವಿರ ರೂ. ನಗದು ಕಳವು ಮಾಡಿದ್ದ ಮೂವರು ಆರೋಪಿಗಳನ್ನು ಪಟ್ಟಣ ಪೊಲೀಸರು ಬಂಧಿಸಿದ್ದಾರೆ.
ತಾಲೂಕಿನ ಕಾಮಗೆರೆ ಗ್ರಾಮದ ನಿವಾಸಿ ಭರತ್(33), ಗುಂಡ್ಲುಪೇಟೆ ಕಾವ್ಯಾ ಹಾಗೂ ಮೈಸೂರಿನ ರೋಹಿತ್ ಬಂಧಿತ ಆರೋಪಿಗಳು. ಜ.18ರಂದು ಬಸವೇಶ್ವರ ಬಡಾವಣೆ ನಿವಾಸಿ ಕೆ.ಎಸ್. ವಿನಯ್ ಎಂಬುವರ ಮನೆಯ ಕಿಟಕಿ ಸರಳನ್ನು ಕಿಡಿಗೇಡಿಗಳು ಮುರಿದು ಒಳನುಗ್ಗಿ 495 ಗ್ರಾಂ ಚಿನ್ನ ಹಾಗೂ 50 ಸಾವಿರ ರೂ. ನಗದು ಕದ್ದೊಯ್ದಿದ್ದರು. ಈ ಸಂಬಂಧ ಕೆ.ಎಸ್.ವಿನಯ್ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು, ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 25.65 ಲಕ್ಷ ರೂ. ಮೌಲ್ಯದ 513 ಗ್ರಾಂ ಚಿನ್ನ ಹಾಗೂ 20 ಸಾವಿರ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಡಿವೈಎಸ್ಪಿ ಸೋಮೇಗೌಡ ತಿಳಿಸಿದ್ದಾರೆ.
ಪ್ರಕರಣ ಭೇದಿಸಿದ ಪೊಲೀಸ್ ತಂಡಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪದ್ಮಿನಿ ಸಾಹೊ ವಿಶೇಷ ನಗದು ಬಹುಮಾನ ನೀಡಿ ಅಭಿನಂದಿಸಿದ್ದಾರೆ. ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ಎನ್.ಜಿ.ಕೃಷ್ಣಪ್ಪ, ಪಿಎಸ್‌ಐ ಬಿ.ಕೆ ಮಹೇಶ್ ಕುಮಾರ್, ರಾಮಸ್ವಾಮಿ, ಕಾನ್ಸ್‌ಟೇಬಲ್ ಬಿಳಿಗೌಡ, ಶಿವಕುಮಾರ್, ಪ್ರಕಾಶ್, ವೆಂಕಟೇಶ್, ಸುನೀಲ್, ವೆಂಕಟೇಶ್, ಅಮರೇಶ, ಶಿವರಾಜ್, ಶಿವ ಪ್ರಸಾದ್ ನಾಯಕ, ರಾಧಾ, ಜ್ಯೋತಿ, ಯಶೋದಾ, ಯಶೋಧಮ್ಮ, ರಾಜಣ್ಣ, ಶಂಕರ್, ವೆಂಕಟೇಶ್, ಶಂಕರ್‌ರಾಜ್ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net