ಮೂವರು ಅರ್ಚಕರನ್ನು ನೇಮಿಸಿದ ಮಂಟೇಸ್ವಾಮಿ ಬಸವ

20M.D.R.9
Published on

ಮದ್ದೂರು: ತಾಲೂಕಿನ ವಳಗೆರೆಹಳ್ಳಿ ಗ್ರಾಮದ ಶ್ರೀ ಪಟ್ಟಲದಮ್ಮ, ಶ್ರೀ ಚಿಕ್ಕಮ್ಮ ದೇವಿ ಮತ್ತು ಸೊಳ್ಳೆಪುರ ಗ್ರಾಮದ ಶ್ರೀ ಎಲ್ಲೇ ಈರಪ್ಪಸ್ವಾಮಿ ದೇವರುಗಳಿಗೆ ಮೂವರು ಅರ್ಚಕರನ್ನು ಮಠದ ಹೊನ್ನ ನಾಯಕನಹಳ್ಳಿ ಮಂಟೇಸ್ವಾಮಿ ಬಸವ ನೇಮಿಸುವ ಮೂಲಕ ಭಕ್ತರಲ್ಲಿ ಹಾಗೂ ಗ್ರಾಮಸ್ಥರಲ್ಲಿ ಅಚ್ಚರಿ ಮೂಡಿಸಿತು.

ಭಾನುವಾರ ಮಂಟೇಸ್ವಾಮಿ ಬಸವಪ್ಪ ಗ್ರಾಮದ ಗಡಿ ಮಾಯಮ್ಮ ದೇವಸ್ಥಾನದ ಬಳಿ ಆಗಮಿಸುತ್ತಿದ್ದಂತೆ ಬಸವಪ್ಪನ ರಥಕ್ಕೆ ಪುಷ್ಪಾರ್ಚನೆ ಮಾಡಿದ ಗ್ರಾಮಸ್ಥರು ಪೂಜಾ ವಿಧಿ ವಿಧಾನಗಳನ್ನು ಪೂರೈಸಿ, ಬಸವಪ್ಪನನ್ನು ಬರಮಾಡಿಕೊಂಡರು.

ನಂತರ ಬಸವಪ್ಪ ದಶಕಗಳಿಂದಲೂ ಎಲ್ಲೇ ಈರಪ್ಪ ಸ್ವಾಮಿ ಅವರಿಗೆ ಅರ್ಚಕರಿಲ್ಲದೆ ಪೂಜಾ ವಿಧಿ ವಿಧಾನಗಳು ತೊಂದರೆಯಾಗುತ್ತಿತ್ತು. ಇಂತಹ ಸಂದರ್ಭದಲ್ಲಿ ಅರ್ಚಕರನ್ನು ನೇಮಿಸಿದ್ದು ಭಕ್ತರಿಗೆ ಹರ್ಷ ತಂದಿತು.

ಬಸವವಪ್ಪ ಆಗಮನದ ಹಿನ್ನೆಲೆಯಲ್ಲಿ ಗ್ರಾಮದ ಪ್ರಮುಖ ಬೀದಿಗಳು ಹಸಿರು ತೋರಣಗಳಿಂದ ಅಲಂಕೃತಗೊಂಡಿದ್ದವು. ಸಾವಿರಾರು ಭಕ್ತರು ಬಸವಪ್ಪನ ಪವಾಡ ಮತ್ತು ದರ್ಶನ ನೋಡಿ ಕಣ್ತುಂಬಿಕೊಂಡರು. ವಳಗೆರೆಹಳ್ಳಿ, ಸೊಳ್ಳೆಪುರ ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಾಗವಹಿಸಿ ಮೂವರು ದೇವತೆಳು ಮತ್ತು ಮಂಟೇಸ್ವಾಮಿ ಬಸಪ್ಪನ ಆಶೀರ್ವಾದ ಪಡೆದು ಪುನೀತರಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net