ಮೂವರ ಪತ್ತೆಗೆ ಪೊಲೀಸರ ಶೋಧ

CTD4..........................
Published on

ಚಿತ್ರದುರ್ಗ: ಪೋಕ್ಸೋ ಪ್ರಕರಣದ ಆರೋಪಿಗಳ ಪೈಕಿ ನಾಪತ್ತೆಯಾಗಿರುವ ಮೂವರು ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ. ಆರೋಪಿತರಾದ ಮರಿಸ್ವಾಮಿ ಬಸವಾಧಿತ್ಯ,ಪರಮಶಿವಯ್ಯ ಹಾಗೂ ಗಂಗಾಧರ್ ಮನೆಗಳಿಗೆ ನೋಟಿಸ್ ತಲುಪಿಸಿದ್ದು,ತನಿಖಾಧಿಕಾರಿ ಮುಂದೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆನ್ನಲಾಗಿದೆ. ನಾಪತ್ತೆಯಾಗಿರುವ ಮೂವರು ಆರೋಪಿಗಳು ಈಗಾಗಲೇ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಅವರ ಅರ್ಜಿಗಳು ವಿಚಾರಣೆಗೆ ಬರಬೇಕಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಶರಣರ ಆರೋಗ್ಯ ತಪಾಸಣೆ ಎಂದಿನಂತೆ ನಡೆದಿದ್ದು,ಅವರು ಚೇತರಿಸಿಕೊಂಡಿದ್ದಾರೆ. ಬೆಳಗ್ಗೆ ಉಪಹಾರ ಸೇವಿಸಿದ್ದಾರೆ. ಶನಿವಾರ ರಾತ್ರಿ ಇಡೀ ಜಿಲ್ಲಾಸ್ಪತ್ರೆ ವೈದ್ಯರೊಬ್ಬರನ್ನು ಮತ್ತೆ ನಿಯೋಜಿಸಲಾಗಿತ್ತು. ಬೆಳಗ್ಗೆ ನಂತರದಲ್ಲಿ ಮತ್ತೊಮ್ಮೆ ಬೇರೊಬ್ಬ ವೈದ್ಯರು ಆರೋಗ್ಯ ತಪಾಸಣೆ ನಡೆಸಿದ್ದಾರೆ. ಸದ್ಯದಲ್ಲೇ ಶರಣರನ್ನು ಪೊಲೀಸರು ಸ್ಥಳ ಮಹಜರಿಗಾಗಿ ಶ್ರೀಮಠಕ್ಕೆಕರೆದೊಯ್ಯುವ ಸಾಧ್ಯತೆಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net