ಮೂವತ್ತೊಕ್ಲು, ಕಿರಗಂದೂರಿಗೆ ಶಾಸಕ ಮಂತರ್‌ಗೌಡ ಭೇಟಿ

23spt1-
ಸೋಮವಾರಪೇಟೆ ತಾಲೂಕಿನ ಕಿರಗಂದೂರು ಗ್ರಾಮದ ಪುರಂದರ ಎಂಬುವರ ಮನೆಗೆ ಶಾಸಕ ಮಂತರ್‌ಗೌಡ ಭೇಟಿ ನೀಡಿ ಪರಿಶೀಲಿಸಿದರು. ತಹಸೀಲ್ದಾರ್ ನರಗುಂದ, ಬಿ.ಬಿ.ಸತೀಶ್, ಲೋಕೇಶ್ ಕುಮಾರ್ ಇದ್ದರು.
Published on

ಸೋಮವಾರಪೇಟೆ: ತಾಲೂಕಿನ ಮೂವತ್ತೊಕ್ಲು ಗ್ರಾಮದ ನಿವಾಸಿ ಜಾನಕಿ ಸಿಡಿಲು ಬಡಿದು ಭಾನುವಾರ ಮೃತಪಟ್ಟಿದ್ದು, ಶಾಸಕ ಮಂತರ್‌ಗೌಡ ಮಂಗಳವಾರ ಗ್ರಾಮಕ್ಕೆ ಭೇಟಿ ನೀಡಿ ಮೃತಳ ಕುಟುಂಬದವರಿಗೆ ಸಾಂತ್ವನ ಹೇಳಿದರು.

ಕಿರಗಂದೂರು ಪಂಚಾಯಿತಿ ವ್ಯಾಪ್ತಿಯ ಹಳ್ಳಿಬೆಟ್ಟ ಗ್ರಾಮದಲ್ಲಿ ಸಿಡಿಲು ಬಡಿತದಿಂದ ಹಾನಿಗೊಳಗಾದ ಪುರಂದರ ಎಂಬುವರ ಮನೆಗೂ ಶಾಸಕರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕುಟುಂಬದ ಸದಸ್ಯರಿಗೆ ಸಾಂತ್ವನ ತಿಳಿಸಿ ಕೂಡಲೇ ಸರ್ಕಾರದ ವತಿಯಿಂದ ಆಗಬೇಕಾದ ಕ್ರಮಗಳನ್ನು ಕೈಗೊಳ್ಳುವಂತೆ ತಹಸೀಲ್ದಾರ್ ಎಸ್.ನರಗುಂದ ಅವರಿಗೆ ಸೂಚನೆ ನೀಡಿದರು.

ಮೃತರ ಮರಣೋತ್ತರ ಪರೀಕ್ಷೆ ವರದಿ ಅಧಾರಿಸಿ ಸರ್ಕಾರ ಸೂಕ್ತ ಪರಿಹಾರ ಕಲ್ಪಿಸಲಿದೆ. ಮನೆಯ ಗೋಡೆ ಹಾನಿಯಾಗಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ವರದಿ ನೀಡಿದ ನಂತರ ಪರಿಹಾರ ಸಿಗಲಿದೆ ಎಂದು ತಹಸೀಲ್ದಾರ್ ನರಗುಂದ ಕುಟುಂಬಸ್ಥರಿಗೆ ತಿಳಿಸಿದರು.

ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ ಬಿ ಸತೀಶ್, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ ಎಂ ಲೋಕೇಶ್, ವಲಯ ಕಾಂಗ್ರೆಸ್ ಅಧ್ಯಕ್ಷ ಸುರೇಂದ್ರ, ಬ್ಲಾಕ್ ಕಾಂಗ್ರೆಸ್ ಪ್ರಮುಖರಾದ ಚೇತನ್, ವಿನಿ, ಲಾರೆನ್ಸ್ ಅಬ್ದುಲ್ ರಜಾಕ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net