ಮೂಳೆ, ಕೀಲು ನೋವು ತಪಾಸಣೆ ಮಂಗಳವಾರ

Bones Health
Published on

ಕಲಬುರಗಿ: ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಿಂದ ಮೂಳೆ ಮತ್ತು ಕೀಲು ನೋವು ಕುರಿತಂತೆ ತಜ್ಞ ವೈದ್ಯರಿಂದ ಸೂಕ್ತ ಸಲಹೆ ನೀಡುವ ಕಾರ್ಯಕ್ರಮ ಮಂಗಳವಾರ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ನಗರದ ಸೆಂಟ್ರಲ್ ಬಸ್ ನಿಲ್ದಾಣ ರಸ್ತೆಯ ರಾಚಪ್ಪ ಆರ್ಕೆಡ್‌ನಲ್ಲಿರುವ ಪಸ್ತಾಪುರ ಆಸ್ಪತ್ರೆಯಲ್ಲಿ ಏರ್ಪಡಿಸಲಾಗಿದೆ.

ಮಣಿಪಾಲ್ ಆಸ್ಪತ್ರೆ ಮೂಳೆ ಮತ್ತು ಕೀಲು ತಜ್ಞ ಡಾ.ಕಿರಣ ಚೌಕ ರೋಗಿಗಳ ಜತೆ ಸಮಾಲೋಚನೆ ನಡೆಸುವರು. ಬೆನ್ನು ಮೂಳೆ, ಸೊಂಟ ನೋವು, ಮೊಣಕಾಲು ಮತ್ತು ಭುಜದ ಸಮಸ್ಯೆ, ಸ್ನಾಯು/ಕೀಲು ನೋವು, ಸಂಧಿಯ ಊತ ಸೇರಿ ಮುಂತಾದ ಸಮಸ್ಯೆಗಳ ಪರಿಹಾರಕ್ಕೆ ಸಲಹೆ ನೀಡಲಿದ್ದಾರೆ. ಆಸಕ್ತರು ಮೊ.98802 63664ಗೆ ಸಂಪರ್ಕಿಸಿ ಹೆಸರು ನೋಂದಾಯಿಸಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net