ಮೂಲಸೌಲಭ್ಯಕ್ಕೆ ಆಗ್ರಹಿಸಿ ಮನವಿ

Appeal to the infrastructure
ಸಿಂದಗಿ ತಾಲೂಕು ಢವಳಾರ ಗ್ರಾಮಕ್ಕೆ ವಿವಿಧ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಶಾಸಕ ಅಶೋಕ ಮನಗೂಳಿ ಅವರಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು. ಧರ್ಮರಾಯಮುತ್ಯಾ ಒಡೆಯರ, ರವಿರಾಜ ದೇವರಮನಿ, ಖಾದರಭಾಷಾ ಅರಳಗುಂಡಗಿ, ನಾಗಣ್ಣ ದೇವುರ, ನಿಂಗನಗೌಡ ಬಿರಾದಾರ, ಅಕ್ಬರ ಖಾನಾಪುರ ಇದ್ದರು.
Published on

ಬ್ರಹ್ಮದೇವನಮಡು: ಸಿಂದಗಿ ತಾಲೂಕು ಢವಳಾರ ಗ್ರಾಮದಲ್ಲಿ ಮಹಿಳೆಯರಿಗಾಗಿ ಸಾರ್ವಜನಿಕ ಶೌಚಗೃಹ, ರಸ್ತೆ ಸುಧಾರಣೆ, ಬೀದಿದೀಪ ಮತ್ತು ಮುಸ್ಲಿಂ ಸಮುದಾಯದ ಸ್ಮಶಾನ ಪ್ರದೇಶಕ್ಕೆ ಕಂಪೌಂಡ್ ನಿರ್ಮಾಣ ಸೇರಿ ವಿವಿಧ ಮೂಲ ಸೌಲಭ್ಯಗಳನ್ನು ಕಲ್ಪಿಸುವಂತೆ ಗ್ರಾಮಸ್ಥರು ಇತ್ತೀಚೆಗೆ ಶಾಸಕ ಅಶೋಕ ಮನಗೂಳಿ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮದಿಂದ ಲಾಳೇ ಮಶ್ಯಾಖ ದರ್ಗಾದವರೆಗೆ ಡಾಂಬರ್ ರಸ್ತೆ ನಿರ್ಮಾಣ, ಬೀದಿದೀಪ, ಗ್ರಾಮದಿಂದ ಕರವಿನಾಳ ರಸ್ತೆ ಸುಧಾರಣೆ, ಕೆಂಚರಾಯ ದೇವಸ್ಥಾನದಿಂದ ಮಲೆಮಹೇಶ್ವರ ದೇವಸ್ಥಾನದವರೆಗೆ ರಸ್ತೆಗೆ ಡಾಂಬರೀಕರಣ ಕಾಮಗಾರಿಗೆ ಮಂಜೂರಾತಿ ದೊರಕಿಸಿಕೊಡಬೇಕು ಎಂದು ಅಮೋಗಿ ಸಿದ್ದೇಶ್ವರ ದೇವಸ್ಥಾನದ ಧರ್ಮದರ್ಶಿ ಧರ್ಮರಾಯ ಮುತ್ಯಾ ಒಡೆಯರ್ ಶಾಸಕ ಮನಗೂಳಿ ಅವರಲ್ಲಿ ಮನವಿ ಮಾಡಿದರು.

ಗ್ರಾಮಸ್ಥರ ಬೇಡಿಕೆಗಳನ್ನು ಹಂತಹಂತವಾಗಿ ಈಡೇರಿಸುವುದಾಗಿ ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದರು.
ಈ ವೇಳೆ ಕಾಂಗ್ರೆಸ್ ಯುವ ಮುಖಂಡ ರವಿರಾಜ ದೇವರಮನಿ(ಗೋಲಗೇರಿ), ಅಂಜುಮನ್ ಇಸ್ಲಾಂ ಕಮಿಟಿ ಅಧ್ಯಕ್ಷ ಖಾದಿರಭಾಷಾ ಅರಳಗುಂಡಗಿ, ಭಾಷಾಸಾಬ ಕಲಬುರ್ಗಿ, ಅಕ್ಬರ್ ಖಾನಾಪುರ, ನಾಗಣ್ಣ ದೇವುರ, ಮೈಬೂಬಸಾಬ ಮುಲ್ಲಾ, ನಿಂಗನಗೌಡ ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net