ಮೂಲಸೌಕರ್ಯಗಳ ಒದಗಿಸಲು ಸರ್ಕಾರ ಬದ್ಧವಾಗಿದೆ-ಸಚಿವ ಎಚ್ಕೆ

6
ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯ, ರಾಮಯ್ಯ ಕಾನೂನು ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಸಮ್ಮೇಳನದಲ್ಲಿ ರಾಮಯ್ಯ ಕಾನೂನು ಕಾಲೇಜಿನ ನಿರ್ದೇಶಕ ಎಂ.ಆರ್.ಆನಂದರಾಮ್ ಅವರನ್ನು ಅಡ್ವೋಕೆಟ್ ಜನರಲ್ ಶಶಿಕಿರಣ ಶೆಟ್ಟಿ ಅವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಪ್ರಭಾವತಿ ಹಿರೇಮಠ, ಗೋಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಆರ್.ಜಯರಾಮ್ ಉಪಸ್ಥಿತರಿದ್ದರು.
Published on

ಬೆಂಗಳೂರು: ಅನಿಯಮಿತ ಹಕ್ಕುಗಳ ಸಾಕಾರಕ್ಕಾಗಿ ಕುಡಿಯುವ ನೀರು, ಆರೋಗ್ಯ ರಕ್ಷಣೆ ಮತ್ತು ಇತರೆ ಮೂಲಸೌಕರ್ಯಗಳನ್ನು ಒದಗಿಸುವುದರ ಸಲುವಾಗಿ ರಾಜ್ಯ ಸರ್ಕಾರವು ಅನೇಕ ಕ್ರಮಗಳನ್ನು ಕೈಗೊಂಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಅವರು ಶುಕ್ರವಾರ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಬೆಂಗಳೂರಿನ ರಾಮಯ್ಯ ಕಾನೂನು ಕಾಲೇಜಿನ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ‘ಸಂವಿಧಾನ ಚೌಕಟ್ಟಿನೊಳಗೆ ಅನಿಯಮಿತ ಹಕ್ಕುಗಳ ಪ್ರಸ್ತುತತೆ’ ಎಂಬ ವಿಷಯದ ಕುರಿತು ಸಚಿವರು ಮಾತನಾಡಿ, ಸರ್ಕಾರ ರಾಜ್ಯದ ಜನತೆಗೆ ಮೂಲಸೌಕರ್ಯಗಳನ್ನು ಒದಗಿಸುವುದ್ಕಾಗಿ ಸರ್ಕಾರ ಬದ್ಧವಾಗಿದೆ ಎಂದರು. ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಕುಲಪತಿ ಪ್ರೊ ಡಾ. ಸುಧೀರ್ ಕೃಷ್ಣಸ್ವಾಮಿ ಅವರು ಉದ್ಘಾಟಿಸಿ, ಸುಧೀರ್ ಕೃಷ್ಣಸ್ವಾಮಿ ಅವರು ಸಾಂವಿಧಾನಿಕ ಇತಿಹಾಸದ ಕುರಿತು ಚರ್ಚಿಸಿದರು. ಅಮೆರಿಕ ಸುಪ್ರೀಂಕೋರ್ಟ್ ನೀಡಿದ ವಿಭಿನ್ನ ವ್ಯಾಖ್ಯಾನಗಳೊಂದಿಗೆ ಸಂವಿಧಾನ ಸಭೆಯ ಪ್ರಮುಖ ಚರ್ಚೆಗಳನ್ನು ತಿಳಿಸಿ ಪ್ರೇಕ್ಷಕರ ಗಮನ ಸೆಳೆದರು.

ಇನ್ನು ಈ ಸಮ್ಮೇಳನವು ಪ್ರಮುಖ ಕ್ರಾಸ್- ಸೊ-ಕೆರಲ್ (ಅಡ್ಡ- ವಲಯ) ಕ್ಷೇತ್ರಗಳಲ್ಲಿನ ಕ್ರಮಕ್ಕಾಗಿ ಶಿಫಾರಸುಗಳನ್ನು ಮಾಡಿದೆ. ಆಡಳಿತ, ಹಣಕಾಸು ಸಂಪನ್ಮೂಲದ ಕ್ರೋಢಿಕರಣ, ಜ್ಞಾನ ಮತ್ತು ಅನುಷ್ಠಾನದ ಹಂಚಿಕೆ- ರಾಜಕೀಯ ಜಾಗೃತಿ ಮತ್ತು ಜತೆಗೆ ನ್ಯಾಯಾಂಗ ಕ್ರಿಯಾಶೀಲತೆ ಇವುಗಳಿಂದ ಭಾರತೀಯ ಸಂವಿಧಾನದ ಅಡಿಯಲ್ಲಿ ಅನಿಯಮಿತ ಹಕ್ಕುಗಳನ್ನು ಸಾಕಾರ ಮಾಡಿಕೊಳ್ಳುವ ಬಗ್ಗೆ ಚರ್ಚಿಸಲಾಯಿತು. ಸಮ್ಮೇಳನದ ಎರಡನೇ ದಿನವೂ ವಿವಿಧ ವಿಷಯಗಳ ಕುರಿತು ಗೋಷ್ಠಿಗಳನ್ನು ಆಯೋಜಿಸಲಾಗಿತ್ತು.

ಅವುಗಳಲ್ಲಿ 55 ಅಧ್ಯಯನ ವರದಿಗಳನ್ನು ಮಂಡಿಸಲಾಯಿತು. ಅದರಲ್ಲಿ ವಿವಿಧ ಅನಿಯಮಿತ ಹಕ್ಕುಗಳ ಬಗ್ಗೆ ವಿವರಣೆ ನೀಡಲಾಯಿತು. ಎಸ್‌ಜೆಆರ್ ಕಾನೂನು ಕಾಲೇಜು, ತುಮಕೂರು ವಿದ್ಯೋದಯ ಕಾನೂನು ಕಾಲೇಜು, ಚಿತ್ರದುರ್ಗದ ಸರಸ್ವತಿ ಕಾನೂನು ಕಾಲೇಜು, ಬೆಂಗಳೂರಿನ ಸೌಂದರ್ಯ ಕಾನೂನು ಕಾಲೇಜು, ಬೆಂಗಳೂರು ಕಾನೂನು ಕಾಲೇಜು, ಮುಂತಾದ ಮುಖ್ಯ ಅತಿಥಿಗಳು, ಎಲ್ಲ ಟ್ರಸ್ಟ್‌ನ ಸದಸ್ಯರು, ಪ್ರಾಂಶುಪಾಲರು ಮತ್ತು ಸಹಯೋಗಿ ಸಂಸ್ಥೆಗಳ ಸಂಯೋಜಕರನ್ನು, ಕೆಎಸ್‌ಎಲ್ ಯು ಕುಲಪತಿಗಳನ್ನು ಸನ್ಮಾನಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಸರ್ಕಾರದ ಅಡ್ಟೊಕೇಟ್ ಜನರಲ್ ಶಶಿಕಿರಣ ಶೆಟ್ಟಿ,
ಕರ್ನಾಟಕ ಸರ್ಕಾರದ ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಪ್ರಭಾವತಿ ಹಿರೇಮಠ, ಜಿಇಎಫ್ ಅಧ್ಯಕ್ಷರು ಎಂ.ಆರ್. ಜಯರಾಮ್, ರಾಮಯ್ಯ ಕಾನೂನು ಕಾಲೇಜು ನಿರ್ದೇಶಕ ಎಂ.ಆರ್. ಆನಂದರಾಮ್ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net