ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ

14kabbur1
ಜಾನಗನೂರ ಗ್ರಾಮದಲ್ಲಿ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿಗೆ ಶಾಸಕ ಡಿ.ಎಂ.ಐಹೊಳೆ ಭೂಮಿಪೂಜೆ ನೆರವೇರಿಸಿದರು. ಸುರೇಶ ಬೆಲ್ಲದ, ಶಿವರಾಯ ಸನದಿ, ಲಕ್ಷ್ಮಣ ಹನುಮನ್ನವರ, ಮಾರುತಿ ಹನುಮನ್ನವರ, ಮಾರುತಿ ಹಮ್ಮಾರ, ಮಾರುತಿ ಪೆಡ್ಡಾರೆ, ಮಾಳಪ್ಪ ಗುರಗುದ್ದಿ, ರಾಮಕೃಷ್ಣ ಗಡಗಡಿ ಇತರರಿದ್ದರು.
Published on

ಕಬ್ಬೂರ: ರಾಯಬಾಗ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದ್ದು, ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ಕಲ್ಪಿಸಲಾಗಿದೆ ಎಂದು ಶಾಸಕ ಡಿ.ಎಂ.ಐಹೊಳೆ ಹೇಳಿದರು.

ಸಮೀಪದ ಜಾಗನೂರ ಗ್ರಾಮದಲ್ಲಿ ಶಾಸಕರ ವಿಶೇಷ ಅನುದಾನದ ಜೆಎಲ್‌ಬಿಸಿ ಕಾಲುವೆಗೆ 30 ಲಕ್ಷ ರೂ. ಸ್ಟೀಲ್ ಬ್ರಿಡ್ಜ್ ನಿರ್ಮಾಣ ಹಾಗೂ ವಿವೇಕ ಯೋಜನೆಯಡಿ ಬಿಡುಗಡೆಯಾದ 14.60 ಲಕ್ಷ ರೂ. ಅನುದಾನದಲ್ಲಿ ಕುಶಬಿನಕೋಡಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ 1 ಕೊಠಡಿ ನಿರ್ಮಾಣ ಕಾಮಗಾರಿಗೆ ಸೋಮವಾರ ಚಾಲನೆ ಮಾತನಾಡಿ, ಕ್ಷೇತ್ರದ ಪ್ರತಿ ಗ್ರಾಮದಲ್ಲಿ ಮೂಲ ಸೌಕರ್ಯ ಕಲ್ಪಿಸಲು ಹೆಚ್ಚಿನ ಅನುದಾನ ಕಲ್ಪಿಸಲಾಗಿದೆ ಎಂದರು.

ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ ನಿರ್ದೇಶಕ ಸುರೇಶ ಬೆಲ್ಲದ ಮಾತನಾಡಿ, ರಾಯಬಾಗ ಕ್ಷೇತ್ರದಲ್ಲಿ ದಶಕದ ಹಿಂದೆ ಇದ್ದ ಎಲ್ಲ ಸಮಸ್ಯೆಗಳಿಗೆ ಶಾಸಕ ಐಹೊಳೆ ಪರಿಹಾರ
ಕಲ್ಪಿಸಿದ್ದಾರೆ ಎಂದು ಹೇಳಿದರು. ತಾಪಂ ಮಾಜಿ ಸದಸ್ಯ ಶಿವರಾಯ ಸನದಿ, ಗ್ರಾಪಂ ಉಪಾಧ್ಯಕ್ಷ ಲಕ್ಷ್ಮಣ ಹನುಮನ್ನವರ, ಮಾರುತಿ ಹನುಮನ್ನವರ, ರಾಮಪ್ಪ ಹನುಮನ್ನವರ, ಮಲ್ಲೇಶ ಹನುಮಂತಗೋಳ, ಮುತ್ತೆಪ್ಪ ಹನುಮನ್ನವರ, ಅಪ್ಪಯ್ಯ ಹನುಮನ್ನವರ, ಹನುಮಂತ ರಬಕವಿ, ಮಾರುತಿ ಹಮ್ಮಾರ, ಮಾರುತಿ ಪೆಡ್ಡಾರೆ, ಮಾಳಪ್ಪ ಗುರಗುದ್ದಿ, ರಾಮಕಷ್ಣ ಗಡಗಡಿ, ರಾಮಪ್ಪ ಗಿಡ್ಡಪ್ಪಗೋಳ, ಸಿದ್ದಪ್ಪ ಗಡಗಡಿ, ಕಲ್ಲಪ್ಪ ಗಡಗಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net