ಮೂಲಸೌಕರ್ಯಕ್ಕೆ ಅಗತ್ಯ ಕ್ರಮ

web1
ಉಗರಗೋಳ ಸಮೀಪದ ಯಲ್ಲಮ್ಮನಗುಡ್ಡದಲ್ಲಿ ಶಾಸಕ ವಿಶ್ವಾಸ ವೈದ್ಯ ಅವರು ಮಹಿಳಾ ಭಕ್ತರಿಗೆ ಅರಿಶಿಣ,-ಕುಂಕುಮ ವಿತರಿಸಿದರು. ಬಸಯ್ಯ ಹಿರೇಮಠ, ವೈ.ವೈ.ಕಾಳಪ್ಪನವರ, ಪುಂಡಲೀಕ ಮೇಟಿ, ಎಸ್‌ಪಿಬಿ ಮಹೇಶ, ಅರವಿಂದ ಮಾಳಗೆ, ಮಲ್ಲು ಜಕಾತಿ ಇತರರಿದ್ದರು.
Published on

ಉಗರಗೋಳ: ಯಲ್ಲಮ್ಮ ಭಕ್ತರಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಬದ್ಧ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಸಮೀಪದ ಯಲ್ಲಮ್ಮನಗುಡ್ಡದಲ್ಲಿ ವರಮಹಾಲಕ್ಷ್ಮೀ ವ್ರತ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಅರಿಶಿಣ, ಕುಂಕುಮ, ಹಸಿರು ಬಳೆ ವಿತರಿಸಿ ಅವರು ಮಾತನಾಡಿದರು. ಯಲ್ಲಮ್ಮ ದೇವಸ್ಥಾನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಹಾಗಾಗಿ ನನ್ನ ಅಧಿಕಾರವಧಿಯಲ್ಲಿ ಯಲ್ಲಮ್ಮಗುಡ್ಡವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕೆಂಬ ಗುರಿ ಹೊಂದಿದ್ದೇನೆ. ಭಕ್ತರಿಗೆ ಶುದ್ಧ ಕುಡಿಯುವ ನೀರು, ವಸತಿ, ಶೌಚಗೃಹ, ವಾಹನಗಳ ನಿಲುಗಡೆ ಸೇರಿ ಎಲ್ಲ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.

ಯಲ್ಲಮ್ಮ ದೇವಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಸಯ್ಯ ಹಿರೇಮಠ, ಸದಸ್ಯರಾದ ವೈ.ವೈ.ಕಾಳಪ್ಪನವರ, ಪುಂಡಲೀಕ ಮೇಟಿ, ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್‌ಪಿಬಿ ಮಹೇಶ, ಅಧೀಕ್ಷಕ ಅರವಿಂದ ಮಾಳಗೆ, ಮಲ್ಲು ಜಕಾತಿ, ಸವದತ್ತಿ ಪುರಸಭೆ ಮಾಜಿ ಅಧ್ಯಕ್ಷ ರಾಜಶೇಖರ ಕಾರದಗಿ, ಪ್ರಭು ಪ್ರಭುನವರ, ಶಂಕ್ರಯ್ಯ ಪಾಟೀಲ, ದೀಪಕ ಜಾಣ್ವೇಕರ, ಆರ್.ಎಚ್.ಸವದತ್ತಿ, ಎಎಸ್‌ಐ ಎಸ್.ಆರ್.ಗಿರಿಯಾಲ, ಸದಾನಂದ ಈಟಿ, ವಿ.ಪಿ.ಸೊನ್ನದ, ಗೋವಿಂದರಾವ್ ಕುಲಕರ್ಣಿ, ದಿಲಾವರಸಾಬ್ ಬಾರಿಗಿಡದ ಇತರರಿದ್ದರು. ವರಮಹಾಲಕ್ಷ್ಮೀ ವ್ರತ ಪ್ರಯುಕ್ತ ಯಲ್ಲಮ್ಮ ದೇವಸ್ಥಾನದ ಅರ್ಚಕರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿದವು. ಭಕ್ತರು ಯಲ್ಲಮ್ಮ ದೇವಿ ದರ್ಶನಾಶೀರ್ವಾದ ಪಡೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net