

ಯರಗಟ್ಟಿ: ಮುಖ್ಯಮಂತ್ರಿಗಳ ವಿಶೇಷ ಅನುದಾನದಲ್ಲಿ ಅಲ್ಪಸಂಖ್ಯಾತರ ಕಾಲನಿಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಪಟ್ಟಣದ ಇಸ್ಲಾಂಪುರ ಗಲ್ಲಿಯಲ್ಲಿ ಮುಖ್ಯಮಂತ್ರಿಗಳ ವಿಶೇಷ ಅಭಿವೃದ್ಧಿ ಯೋಜನೆ ಹಾಗೂ ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಶನಿವಾರ 5 ಕೋಟಿ ರೂ. ಮೊತ್ತದ ರಸ್ತೆ ಕಾಮಗಾರಿಗೆ ಭೂಮಿ ನೆರವೇರಿಸಿ ಮಾತನಾಡಿದರು. ಗ್ರಾಮೀಣ ಭಾಗದ ಮೂಲಸೌಕರ್ಯಗಳ ಜತೆಗೆ ನೀರಾವರಿಗೂ ಒತ್ತು ನೀಡಲಾಗುವುದು ಎಂದರು. ಮುಖಂಡರಾದ ನಿಖಿಲಕುಮಾರ ದೇಸಾಯಿ, ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಶಂಕರ ಇಟ್ನಾಳ, ಬಾಳೇಶ ಕೌಜಲಗಿ, ಕಾಸಿಮಸಾಬ್ ಹೊರಟ್ಟಿ, ಶಬ್ಬಿರ್ ಬಿಳಗಿ, ಡಿ.ಕೆ. ರಫೀಕ್, ಶಿವಾನಂದ ಕರಿಗನ್ನವರ, ಭಾಸ್ಕರ ಹಿರೇಮೇತ್ರಿ, ಸಲೀಂ ಜಮಾದಾರ, ನಿಖಿಲ ಪಾಟೀಲ, ಾರೂಕ್ ಅತ್ತಾರ, ಹನಮಂತ ಹಾರುಗೊಪ್ಪ, ಅಮೀರ ದೇವಡಿ, ಫೀರಸಾಬ್ ತಹಸೀಲ್ದಾರ ಇತರರು ಇದ್ದರು.