ಮೂಲಸೌಕರ್ಯ ಕಲ್ಪಿಸಲು ಕ್ರಮ

25blrp1
ಬೇಲೂರು ಪಟ್ಟಣದ ಚನ್ನಕೇಶವಗೌಡರ ಬೀದಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗೆ ಗಣ್ಯರು ಭೂಮಿಪೂಜೆ ನೆರವೇರಿಸಿದರು.
Published on

ಬೇಲೂರು: ಪಟ್ಟಣದ 7ನೇ ವಾರ್ಡ್‌ನ ಚನ್ನಕೇಶವಗೌಡರ ಬೀದಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಕಾಮಗಾರಿಗೆ ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ವೆಂಕಟೇಶ್ ಶನಿವಾರ ಭೂಮಿಪೂಜೆ ನೆರವೇರಿಸಿದರು.

ಮತದಾರರ ಬೇಡಿಕೆಯಂತೆ 7ನೇ ವಾರ್ಡ್ ಸೇರಿದಂತೆ ಇತರ ವಾರ್ಡ್‌ಗಳಿಗೂ ಅನುಕೂಲವಾಗುವಂತೆ ನೀರಿನ ಪೈಪ್‌ಲೈನ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ. ಮುಂದಿನ ದಿನಗಳಲ್ಲಿ ಪಟ್ಟಣದ 23 ವಾರ್ಡ್‌ಗಳಲ್ಲಿ ಕುಂದು ಕೊರತೆ ಆಲಿಸಿ ಮೂಲಸೌಕರ್ಯ ಕಲ್ಪಿಸಲಾಗುವುದು ಎಂದರು.

ವಕೀಲ ಲಿಂಗರಾಜು, ಶಂಕರ್, ಈಶ್ವರ್, ಮಧು, ಉಷಾ, ರುಕ್ಮಿಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net