ಮೂಲ ಸೌಲಭ್ಯ ಕಲ್ಪಿಸುವಂತೆ ಆಗ್ರಹ

02Jagg3
ಬೆಳಗಾವಿಗೆ ಮಂಜೂರಾಗಿರುವ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಂಚಾರಿ ಕಾಯಂ ಪೀಠ ಕಾರ್ಯ ನಿರ್ವಹಣೆಗೆ ಅಗತ್ಯ ಮೂಲ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ವಕೀಲರು ಕೋರ್ಟ್ ಎದುರು ಶುಕ್ರವಾರ ಪ್ರತಿಭಟಿಸಿದರು. ಪ್ರಭು ಯತ್ನಟ್ಟಿ, ಗಿರೀಶ ಪಾಟೀಲ, ಎನ್.ಆರ್. ಲಾತೂರ್, ಸಚಿನ್ ಶಿವಣ್ಣವರ, ಸುಧೀರ್ ಚವ್ಹಾಣ ಇತರರಿದ್ದರು.
Published on

ಬೆಳಗಾವಿ: ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಂಚಾರಿ ಕಾಯಂ ಪೀಠ ಬೆಳಗಾವಿಗೆ ಮಂಜೂರಾಗಿ ಆರು ತಿಂಗಳು ಗತಿಸಿದರೂ ಅಗತ್ಯ ಮೂಲ ಸೌಲಭ್ಯ ಕಲ್ಪಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ವಕೀಲರು ಕೋರ್ಟ್ ಎದುರಿನ ರಸ್ತೆಯಲ್ಲಿ ಶುಕ್ರವಾರ ವಾಹನಗಳ ಸಂಚಾರ ತಡೆದು ಪ್ರತಿಭಟಿಸಿದರು.

ಕಲಬುರಗಿಗೆ ಮಂಜೂರಾಗಿರುವ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸಂಚಾರಿ ಕಾಯಂ ಪೀಠಕ್ಕೆ ಈಗಾಗಲೇ ಸೌಲಭ್ಯ ಕಲ್ಪಿಸಲಾಗುತ್ತಿದೆ. ಆದರೆ, ಬೆಳಗಾವಿಯಲ್ಲಿ ಪೀಠ ಮಂಜೂರಾಗಿ ಆರು ತಿಂಗಳು ಗತಿಸಿದರೂ ಯಾವುದೇ ರೀತಿಯ ಮೂಲ ಸೌಲಭ್ಯ ಕಲ್ಪಿಸಲು ಮುಂದಾಗುತ್ತಿಲ್ಲ. ಈ ಕೂಡಲೇ ಪೀಠ ಕಾರ್ಯಾರಂಭ ಮಾಡುವುದಕ್ಕೆ ಜಿಲ್ಲಾ ಕೋರ್ಟ್ ಆವರಣದಲ್ಲೇ ಕಟ್ಟಡದ ವ್ಯವಸ್ಥೆ ಮಾಡಬೇಕು.

ಅಗತ್ಯ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಪ್ರಭು ಯತ್ನಟ್ಟಿ, ಗಿರೀಶ ಪಾಟೀಲ, ಎನ್.ಆರ್.ಲಾತೂರ್, ಸಚಿನ ಶಿವಣ್ಣವರ, ಸುಧೀರ ಚವ್ಹಾಣ, ಕಪಾಯಿ ಭಂಟಿ, ಎಂ.ಎಸ್. ನಂದಗಾವಿ, ಸಿದ್ದು ತುಗಶೆಟ್ಟಿ, ಡಿ.ಆರ್.ಪಾಟೀಲ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net