ಮೂಲ ಸೌಲಭ್ಯ ಕಲ್ಪಿಸಲು ಪಟ್ಟು

CTD STRIKE--00003
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (0.5335713, 0.47653565);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41;
Published on

ಚಿತ್ರದುರ್ಗ: ಹಿರಿಯೂರು ಹರಿಶ್ಚಂದ್ರಘಾಟ್ ಸಮೀಪದ ಮಾರುತಜ್ಜನ ಕಾಲನಿ ಅಲೆಮಾರಿ ಶಿಳ್ಳೇಕ್ಯಾತರ ಕುಟುಂಬಗಳಿಗೆ ಮೂಲ ಸೌಕರ್ಯ ಹಾಗೂ ನಿವೇಶನ ಹಂಚಿಕೆಯೊಂದಿಗೆ ಹಕ್ಕುಪತ್ರ ಒದಗಿಸುವಂತೆ ಒತ್ತಾಯಿಸಿ ಮಹಾನಾಯಕ ದಲಿತ ಸೇನೆಯಿಂದ ಚಿತ್ರದುರ್ಗದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು.
ಈ ಕಾಲನಿಯಲ್ಲಿ ಶಿಳ್ಳೇಕ್ಯಾತರ ಅಂದಾಜು 50 ಕುಟುಂಬಗಳು ನೂರಾರು ವರ್ಷಗಳಿಂದ ವಾಸಿಸುತ್ತಿದ್ದು, ಇಲ್ಲಿರುವ ಯಾರೊಬ್ಬರಿಗೂ ನಿವೇಶನಗಳಿಲ್ಲ. ಶಿಳ್ಳೇಕ್ಯಾತರ ಮುಖಂಡ ಮಾರುತಜ್ಜನ ಹೆಸರಲ್ಲಿ 2 ಎಕರೆ ಮಾರುತಜ್ಜ ಬಡಾವಣೆ ಎಂದು ಭೂ-ದಾಖಲೆಗಳಲ್ಲಿದೆ. ದೇಶಕ್ಕೆ ಸ್ವಾತಂತ್ರ್ಯ ಇಷ್ಟು ವರ್ಷಗಳಾದರೂ ಸಂಬಂಧಿಸಿದ ಅಧಿಕಾರಿಗಳು ಹಕ್ಕುಪತ್ರ ಹಂಚಿಕೆ ಮುಂದಾಗಿಲ್ಲ. ಮನೆ ನಿರ್ಮಾಣಕ್ಕೆ ಅನುಮತಿ ನೀಡುತ್ತಿಲ್ಲ. ಇದರಿಂದ ಕಾಲನಿಗೆ ಅಗತ್ಯವಿರುವ ಮೂಲ ಸೌಕರ್ಯಗಳು ಪಡೆದುಕೊಳ್ಳಲು ಸಾಧ್ಯವಾಗಿಲ್ಲ ಎಂದು ದೂರಿದರು.
ಶಿಳ್ಳೇಕ್ಯಾತ ಸಮುದಾಯವನ್ನು ಕಿಳ್ಳೇಕ್ಯಾತ, ಬುಂಡೆಬೆಸ್ತ, ಕಟುಬು, ಕಟಬರ ಮುಂತಾದ ಬದಲಿ ಹೆಸರುಗಳಿಂದ ಕರೆಯಲಾಗುತ್ತಿದೆ. ಶಿಳ್ಳೇಕ್ಯಾತ ಮತ್ತು ಕಿಳ್ಳೇಕ್ಯಾತ ಎಂಬ ಪದಗಳು ಹಲವು ಸಮಸ್ಯೆಗಳಿಗೆ ಕಾರಣವಾಗಿದ್ದು, ಸೂಕ್ತ ಮೀಸಲು ಸೌಲಭ್ಯಗಳಿಂದ ವಂಚಿತವಾಗಿದ್ದಾರೆ. ಆದ್ದರಿಂದ ಸರ್ಕಾರ ಈ ಗೊಂದಲವನ್ನು ನಿವಾರಿಸಬೇಕೆಂದು ಆಗ್ರಹಿಸಿದರು.
ಸೇನೆ ಅಧ್ಯಕ್ಷ ಮಂಜುನಾಥ್ ತಾಳಿಕೇರೆ, ಕಾರ್ಯಾಧ್ಯಕ್ಷ ಕೆ.ಪಿ.ಶ್ರೀನಿವಾಸ್, ಹೊಳೆಯಪ್ಪ ಪಾಳ್ಯ, ರವಿಕುಮಾರ್, ಕುಮಾರಸ್ವಾಮಿ, ವೀಣಂ ರಾಮದಾಸ್, ಉಮಾದೇವಿ, ಸಗ್ಮಾ, ರಾಕೇಶ್, ಶಾರದಮ್ಮ, ಆನಂತರಾವ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net