

ಚಿತ್ರದುರ್ಗ: ನಗರದ ರಾಜಕಾಲುವೆ,ಚರಡಿಗಳಲ್ಲಿ ತುಂಬಿರುವ ಹೂಳೆತ್ತಿಸಿ,ಚರಂಡಿಗಳನ್ನು ದುರಸ್ಥಿಗೊಳಿಸುವಂತೆ ಒತ್ತಾಯಿಸಿ ಸ್ಲಂ ಜನಾಂ ದೋಲನ-ಕರ್ನಾಟಕದ ಜಿಲ್ಲಾ ಶಾಖೆ ಕಾರ‌್ಯಕರ್ತರು ಶುಕ್ರವಾರ ನಗರಸಭೆ ಮ್ಯಾನೇಜರ್ ಮಂಜುಳಾ ಅವರಿಗೆ ಮನವಿ ಸಲ್ಲಿಸಿದರು.
ಜೋಗಿಮಟ್ಟಿ ರಸ್ತೆ 4 ನೇ ಕ್ರಾಸ್ ರಾಜಕಾಲುವೆಯಲ್ಲಿ ಹಲವು ವರ್ಷಗಳಿಂದ ಹೂಳೆತ್ತಿಲ್ಲ. ಮಾಳಪ್ಪನಹಟ್ಟಿ ಲೇಔಟ್‌ನ ಆಶ್ರಯ ಬಡಾ ವಣೆ 2ನೇ ಹಂತದ 2ನೇ ಬೀದಿಯಲ್ಲಿ ಚರಂಡಿ ಬ್ಲಾಕ್ ಆಗಿದ್ದು,ನೀರು ಸರಾಗ ಹರಿಯದೆ ಸೊಳ್ಳೆಗಳ ತಾಣವಾಗಿದ್ದು,ಸಾಂಕ್ರಾಮಿಕ ರೋ ಗಗಳ ಭೀತಿ ಉಂ ಟಾಗಿದೆ.
ಈ ಕುರಿತಂತೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಸ್ಲಂ ಜನಾಂದೋ ಲನ-ಕರ್ನಾಟಕ ಜಿಲ್ಲಾ ಶಾಖೆಯವರು ಆಪಾದಿಸಿದರು.
ಇದೇ ವೇಳೆ ಬೀದಿ ದೀಪ ಸಹಿತ ಮೂಲ ಸೌಕರ್ಯಗಳ ಸಮಸ್ಯೆ ನಿವಾರಿಸುವಂತೆ ಆಗ್ರಹಿಸಿದ ಸದಸ್ಯರು,ಸೂಕ್ತ ಕ್ರಮಕ್ಕೆ ಮುಂದಾಗ ದಿದ್ದರೆ ನಗರಸಭೆ ಎದುರು ಪ್ರತಿಭಟಿಸುವುದಾಗಿ ಎಚ್ಚರಿಸಿದರು.ಜಿಲ್ಲಾ ಶಾಖೆ ಸಂಚಾಲಕ ಟಿ.ಮಂಜಣ್ಣ,ಜಿಲ್ಲಾಧ್ಯಕ್ಷ ಎಂ.ಮಹೇಶ್,ಮಾಲತಿ, ಭಾಗ್ಯಮ್ಮ, ವರಲಕ್ಷ್ಮೀ,ಮಂಜುನಾಥ,ಮಂಜಕ್ಕ,ಸಲ್ಮಾ,ಡಿಎಸ್‌ಎಸ್ ಸಂಘಟನೆಯ ರುದ್ರಮುನಿ ಮತ್ತಿತರರು ಇದ್ದರು.