ಮೂಲ ಸೌಕರ್ಯಕ್ಕೆ ಆದ್ಯತೆ

7-22
ಕಬ್ಬೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಿ.ಎಂ.ಐಹೊಳೆ ಚಾಲನೆ ನೀಡಿದರು. ಪವನ ಕತ್ತಿ, ಸುರೇಶ ಬೆಲ್ಲದ, ಸದಾಶಿವ ಘೋರ್ಪಡೆ, ಮಹಾಲಿಂಗ ಹಂಜಿ, ಬಸಲಿಂಗ ಕಾಡೇಶಗೋಳ, ಮಹಾದೇವ ಜಿವಣಿ, ಮಹಾದೇವ ಪ್ರದಾನಿ ಇತರರಿದ್ದರು.
Published on

ಕಬ್ಬೂರ: ರಾಯಬಾಗ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನ ತಂದು ಮೂಲ ಸೌಕರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಸಕ ಡಿ.ಎಂ.ಐಹೊಳೆ ತಿಳಿಸಿದರು.
ಗ್ರಾಮದಲ್ಲಿ ಮಂಗಳವಾರ ನಗರೋತ್ಥಾನ ಯೋಜನೆಯಡಿ ಬಿಡುಗಡೆಯಾದ 2.25 ಕೋಟಿ ರೂ. ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಪ್ರತಿ ಪಟ್ಟಣ ಪಂಚಾಯಿತಿಗೆ 5 ಕೋಟಿ ರೂ. ಹಾಗೂ ನಗರಸಭೆಗಳಿಗೆ 10 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆಗೊಳಿಸಿದೆ. ಅದರಲ್ಲಿ ಸದ್ಯ ಕಬ್ಬೂರ ಪಪಂಗೆ 2.25 ಕೋಟಿ ರೂ.ಗಳ 5 ವಿವಿಧ ವಾರ್ಡ್‌ಗಳ ರಸ್ತೆ ಹಾಗೂ 3 ವಾರ್ಡ್‌ಗಳ ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯ ಪವನ ಕತ್ತಿ ಮಾತನಾಡಿ, ರಸ್ತೆ ನಿರ್ಮಿಸುವ ಸಂದರ್ಭದಲ್ಲಿ ಅಕ್ಕ ಪಕ್ಕದವರು ಅಗತ್ಯ ಜಾಗ ನೀಡುವ ಮೂಲಕ ಗುಣಮಟ್ಟದ ರಸ್ತೆ ನಿರ್ಮಿಸಿಕೊಳ್ಳಬೇಕು ಎಂದರು. ಹಿರಾ ಶುಗರ್ಸ್‌ ನಿರ್ದೇಶಕ ಸುರೇಶ ಬೆಲ್ಲದ, ಸದಾಶಿವ ಘೋರ್ಪಡೆ, ಮಹಾಲಿಂಗ ಹಂಜಿ, ಬಸಲಿಂಗ ಕಾಡೇಶಗೋಳ, ಮಹಾದೇವ ಜಿವಣಿ, ಮಹಾದೇವ ಪ್ರದಾನಿ, ಕಲ್ಲಪ್ಪ ಕರಗಾವಿ, ಸುಭಾಷ ಮುಗಳಖೋಡ, ಗುಲಾಬ ಮಕಾನದಾರ, ಹಸನ್ ಮಕಾನದಾರ್, ಅಬ್ಬಾಸ್ ನದ್ಾ, ಸಿದಲಿಂಗ ಪೂಜೇರಿ, ಶ್ರೀಶೈಲ ತೆರದಾಳ, ಪಪಂ ಮುಖ್ಯಾಧಿಕಾರಿ ಎಂ.ಎಂ.ತಿಮ್ಮಾಣಿ, ಗುತ್ತಿಗೆದಾರ ಸದಾಶಿವ ದಳವಾಯಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net