ಮೂಲ ಸೌಕರ್ಯ ಒದಗಿಸಲು ಪಣ

web2
ಮುನವಳ್ಳಿ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವಿಶ್ವಾಸ ವೈದ್ಯ ಭೂಮಿಪೂಜೆ ನೆರವೇರಿಸಿದರು. ಡಿ.ಡಿ.ಕಿನ್ನೂರಿ, ಸಿ.ಬಿ.ಬಾಳಿ, ಮೀರಾಸಾಬ ವಟ್ನಾಳ, ಪಂಚು ಬಾರಕೇರ ಇತರರು ಇದ್ದರು.
Published on

ಮುನವಳ್ಳಿ: ಪಟ್ಟಣದ ಮೇದಾರ ಓಣಿಯಲ್ಲಿ ನಗರೋತ್ಥಾನ ಯೋಜನೆಯ ಹಂತ-4 ರ ಅಡಿಯಲ್ಲಿ ಪಟ್ಟಣದ ವಿವಿಧ ವಾರ್ಡ್‌ಗಳ ಒಟ್ಟು 177.82 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವಿಶ್ವಾಸ ವೈದ್ಯ ಬುಧವಾರ ಭೂಮಿಪೂಜೆ ನೆರವೇರಿಸಿದರು.

ಮುನವಳ್ಳಿ ಪಟ್ಟಣದ ಅಭಿವೃದ್ಧಿಗಾಗಿ ನಗರೋತ್ಥಾನ ಯೋಜನೆಯಡಿ ಐದು ವಾರ್ಡ್‌ಗಳಲ್ಲಿ ಮೂಲ ಸೌಕರ್ಯಗಳಿಗೆ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ಅವುಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಬರುವಂಥ ದಿನಗಳಲ್ಲಿ ಮುನವಳ್ಳಿಯನ್ನು ಮಾದರಿ ಪಟ್ಟಣವನ್ನಾಗಿ ಮಾಡಲು ಶ್ರಮಿಸುವುದಾಗಿ ಹೇಳಿದರು.

ಪುರಸಭೆ ಸದಸ್ಯರಾದ ಸಿ.ಬಿ.ಬಾಳಿ, ಡಿ.ಡಿ.ಕಿನ್ನೂರಿ, ಮೀರಾಸಾಬ್ ವಟ್ನಾಳ, ಈಶ್ವರ ಕರೀಕಟ್ಟಿ, ಶ್ರೀಶೈಲ ನೇಗಿನಾಳ, ಪಂಚು ಬಾರಕೇರ, ಮುಬಾರಕ್ ಬೈರಕದಾರ, ವಿನಾಯಕ ಕಟ್ಟೇಕಾರ, ಸಮೀವುಲ್ಲಾ ಚೂರಿಖಾನ್, ಸಲೀಂ ಬೆಳವಡಿ, ಲುಕಮಾನ್ ದನದಮನಿ, ಅನಿಲ ಕಟ್ಟಿಮನಿ, ಪುರಸಭೆ ಮುಖ್ಯಾಧಿಕಾರಿ ಡಿ.ಎನ್. ತಹಸೀಲ್ದಾರ್, ಅನಿಲ ಗಿಡ್ನಂದಿ, ಈರಣ್ಣ ಪ್ರಭುನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net