

ಚಿತ್ರದುರ್ಗ: ಕಳೆದ 31 ವರ್ಷಗಳ ಹಿಂದೆ ಭರಮಸಾಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದಾಗ,ಸರ್ಕಾರದಲ್ಲಿ ನೌಕರರಿಗೆ ಸಂಬಳ ಕೊಡಲು ಹ ಣ ವಿರಲಿಲ್ಲ.ಅಂತಹ ಕಷ್ಟದ ಕಾಲದಲ್ಲಿ ಕ್ಷೇತ್ರದ 385 ಹಳ್ಳಿಗಳಲ್ಲಿ ರಸ್ತೆ ಮಾಡಿಸಿದ್ದೇನೆ ಎಂದು ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ ಹೇಳಿದರು. ಹೊ ಳಲ್ಕೆರೆ ತಾಲೂಕು ರಾಮಗಿರಿಯಲ್ಲಿ ಶನಿವಾರ 1.79 ಕೋಟಿ ರೂ.ವೆಚ್ಚ ಜಲ ಜೀವನ್ ಮಿಷನ್ ಯೋಜನೆಯಡಿ ಪ್ರತಿ ಮನೆಗೂ ಕುಡಿಯುವ ನೀರು ಸರಬರಾಜು ಕಾಮಗಾರಿಗೆ ಶನಿವಾರ ಭೂಮಿಪೂಜೆ ಸಲ್ಲಿಸಿ ಮಾತನಾಡಿದರು.
ತಾಲೂಕಿನಾದ್ಯಂತ ಪ್ರತಿ ಮನೆಗೂ ಶುದ್ಧ ಕುಡಿಯುವ ನೀರು ಪೂರೈಸುವುದಕ್ಕಾಗಿ ಹಿರಿಯೂರಿನ ವಾಣಿವಿಲಾಸಸಾಗರದ 67 ಕೋಟಿ ರೂ. ವೆಚ್ಚದಲ್ಲಿ ಫಿಲ್ಟರ್ ಅಳವಡಿಸಲಾಗಿದೆ. ಪೈಪ್‌ಲೈನ್ ಕಾಮಗಾರಿ ಮುಗಿದಿದ್ದು, ಇನ್ನು ಮೂರ‌್ನಾಲ್ಕು ತಿಂಗಳಲ್ಲಿ ನೀರು ಪೂರೈಕೆಯಾಗಲಿದೆ ಎಂದರು.
ಗ್ರಾಪಂ ಅಧ್ಯಕ್ಷೆ ಶಾರದಮ್ಮ, ಉಪಾಧ್ಯಕ್ಷೆ ಯಶೋದಮ್ಮ,ಸದಸ್ಯರಾದ ಸಿದ್ದೇಶಣ್ಣ,ರಾಜಣ್ಣ,ಹೇಮಂತಣ್ಣ, ಷಣ್ಮಖ, ಚಿತ್ತಮ್ಮ, ಶಾಂತಮ್ಮ, ಶಿವಶಂಕರ್‌ನಾಯ್ಕ, ಯಶೋದಮ್ಮ, ಅನುಸೂಯಮ್ಮ, ರವಿಕುಮಾರ, ರಾಜಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಕುಮಾರಣ್ಣ ಗ್ರಾಮದ ಮುಖಂಡರು ಇದ್ದರು.