ಮೂರು ವಾರ್ಡ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಭಾಜನ Survekshan

ರಾಜ್ಯದ ವಿವಿಧ ಜಿಲ್ಲೆಗಳ ಮೂರು ವಾರ್ಡ್‌ಗಳು ಸ್ವಚ್ಛ ಸರ್ವೇಕ್ಷಣ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿವೆ.
logo
vijayavanifolder
Published on: 

ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳ ಮೂರು ವಾರ್ಡ್‌ಗಳು ಸ್ವಚ್ಛ ಸರ್ವೇಕ್ಷಣ ರಾಷ್ಟ್ರೀಯ ಪ್ರಶಸ್ತಿಗೆ ಭಾಜನವಾಗಿವೆ.

ಬಿಟಿಎಂ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೋರಮಂಗಲ (151ನೇ ವಾರ್ಡ್), ದಾವಣಗೆರೆ ನಗರದ ವಾರ್ಡ್7 ಮತ್ತು 36ನೇ ವಾರ್ಡ್ ಪ್ರಶಸ್ತಿಗೆ ಆಯ್ಕೆಯಾಗಿವೆ.

ವಿಭಾಗ-1ರಲ್ಲಿ ಕೋರಮಂಗಲದಲ್ಲಿ 30 ಸಾವಿರ, ವಿಭಾಗ-2ರಲ್ಲಿ ದಾವಣಗೆರೆ 36ನೇ ವಾರ್ಡಿನಲ್ಲಿ 10 ಸಾವಿರದಿಂದ 30 ಸಾವಿರ ಹಾಗೂ ವಿಭಾಗ-3ರಲ್ಲಿ 7ನೇ ವಾರ್ಡಿನಲ್ಲಿ 10 ಸಾವಿರಕ್ಕಿಂತ ಕಡಿಮೆ ಜನಸಂಖ್ಯೆ ಇದೆ. ಘನತ್ಯಾಜ್ಯ ನಿರ್ವಹಣೆ, ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ಒತ್ತು ನೀಡಲಾಗಿದೆ.

ಈ ಪ್ರಯತ್ನಗಳಿಗೆ ರಾಷ್ಟ್ರ ಮಟ್ಟದಲ್ಲಿ ಮನ್ನಣೆ ಪಡೆದುಕೊಂಡಿದೆ ಎಂದು ಸ್ವಚ್ಛ ವಾಯು ಸಮೀಕ್ಷೆಯಲ್ಲಿ ಆಯ್ಕೆಯಾಗಿವೆ. ಪೌರಕಾರ್ಮಿಕರು, ನಾಗರಿಕರ ಸಾಮೂಹಿಕ ಪ್ರಯತ್ನದಿಂದ ಪ್ರಶಸ್ತಿಗೆ ಆಯ್ಕೆಯಾಗಿವೆ. ಈ ಪ್ರಯತ್ನವು ರಾಜ್ಯದ ಇತರೆ ವಾರ್ಡ್‌ಗಳಲ್ಲೂ ಪರಿಸರ ಕಾಪಾಡಲು ಸಹಕಾರಿಯಾಗಿವೆ ಎಂದು ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.