ಮೂರು ವರ್ಷಕಳೆದರೂ ಬಾರದ ಪರಿಹಾರ, ಅತಂತ್ರ ಸ್ಥಿತಿಯಲ್ಲಿ ಸಂತ್ರಸ್ತರು

_web 1
Published on

ಕಳಸ: 2019ರ ಆ.9ರಂದು ಸುರಿದ ಮಹಾಮಳೆಗೆ ಮನೆಗಳನ್ನು ಕಳೆದುಕೊಂಡು ನಿರಾಶ್ರಿತರಾದ ತಾಲೂಕಿನ ಚನ್ನಡ್ಲು ಪ್ರದೇಶದ ಸಂತ್ರಸ್ತರು ಸೌಲಭ್ಯಕ್ಕಾಗಿ ಚನ್ನಡ್ಲು ಅತಿವೃಷ್ಟಿ ಸಂತ್ರಸ್ತರ ಹೋರಾಟ ಸಮಿತಿ ನೇತೃತ್ವದಲ್ಲಿ ಜು.7ರಂದು ಚನ್ನಡ್ಲು ಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೈಕ್ ರ‍್ಯಾಲಿ ಹಮ್ಮಿಕೊಂಡಿದ್ದಾರೆ.
ಅಂದಿನ ಮಹಾಮಳೆಗೆ ಭೂ ಕುಸಿತ ಉಂಟಾಗಿ ಚನ್ನಡ್ಲು ಪ್ರದೇಶದ 26 ಕುಟುಂಬಗಳು ಬೀದಿಗೆ ಬಂದಿದ್ದವು. ಈ ಪ್ರದೇಶ ವಾಸ ಮಾಡಲು ಯೋಗ್ಯವಾಗಿಲ್ಲ. ಇಲ್ಲಿ ವಾಸಿಸುತ್ತಿರುವ ಕುಟುಂಬಗಳ ಸ್ಥಳಾಂತರ ಅನಿವಾರ್ಯ ಎಂದು ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಕುಟುಂಬಗಳ ಸ್ಥಳಾಂತರಕ್ಕೆ ಸೂಚಿಸಿದರು.
ಸಂತ್ರಸ್ತರ ಕುಟುಂಬಗಳಿಗೆ ನಿವೇಶನ, ಮನೆ ನಿರ್ವಿುಸಲು 5 ಲಕ್ಷ ರೂ. ಹಾಗೂ ಬಾಡಿಗೆ ಮನೆಯಲ್ಲಿ ಇರಲು 50 ಸಾವಿರ ರೂ. ಬಾಡಿಗೆ ಹಣ ನೀಡುವುದಾಗಿ ಸರ್ಕಾರ ಘೊಷಿಸಿತ್ತು. ಅದರಂತೆ ಕಳಸ ಸಮೀಪದ ಕುಂಬಳಡಿಕೆಯ ಸರ್ವೆ ನಂ.153ರಲ್ಲಿ ಸಂತ್ರಸ್ತರಿಗೆ ನಿವೇಶನಕ್ಕಾಗಿ ಭೂಮಿ ಕಾಯ್ದಿರಿಸಿ ಹಂಚಿಕೆ ಮಾಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net