

ಯಾದಗಿರಿ: ಒಳ ಮೀಸಲಾತಿ ಎತ್ತಿಹಿಡಿಯುವ ಮೂಲಕ ಸುಪ್ರಿಂ ಕೋರ್ಟ್ ನೀಡಿರುವ ತೀರ್ಪು ದೇಶದ ಮಾದಿಗ ಸಮಾಜಕ್ಕೆ ಸಂದ ಜಯವಾಗಿದೆ ಎಂದು ಮಾದಿಗ ಸಮಾಜದ ಹಿರಿಯ ಮುಖಂಡ ಹಾಗೂ ಬಿಜೆಪಿ ನಾಯಕ ದೇವೇಂದ್ರನಾಥ ನಾದ್ ಹೇಳಿದರು.
ಮೀಸಲಾತಿ ಎತ್ತಿಹಿಡಿದ ನ್ಯಾಯಲಯದ ತೀರ್ಪು ಸ್ವಾಗತಿಸಿದ ಇಲ್ಲಿನ ಮಾದಿಗ ಸಮಾಜದ ನೂರಾರು ಜನರು ನೇತಾಜಿ ಸುಭಾಷಚಂದ್ರ ಬೋಸ್ ಮತ್ತು ಡಾ.ಅಂಭೇಡ್ಕರ್ ವೃತ್ತಗಳ ಬಳಿ ಜಮಾಯಿಸಿ ವಿಜಯೋತ್ಸವ ಆಚರಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಬೇಕು ಎಂಬ ಹಲವು ವರ್ಷಗಳ ಬೇಡಿಕೆ ಎತ್ತಿ ಹಿಡಿದ ಸುಪ್ರೀಂ ಕೋರ್ಟ್‍ನ ತೀರ್ಪಿನಿಂದಾಗಿ ಮೂರು ದಶಕಗಳ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಹೇಳಿದರು.
ಮಾದಿಗ ಸಮಾಜದ ಬೇಡಿಕೆಯನ್ನು ಪರಿಗಣಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, ತೀರ್ಪಿಗಾಗಿ ವೀಶೇಷ ಪೀಠ ಸ್ಥಾಪಿಸುವ ಮೂಲಕ, ಕಾಲಮಿತಿಯೊಳಗೆ ನಮಗೆ ನ್ಯಾಯ ಸಿಗುವಂತೆ ಮಾಡಿದ್ದಾರೆ. ಅವರು ಈ ಕುರಿತು ನೀಡಿದ ಭರವಸೆ ಈಡೇರಿಸಿದ್ದಾರೆ ಎಂದು ಹೇಳಿದರು.
ಕೂಡಲೇ ಆಯಾ ರಾಜ್ಯ ಸರ್ಕಾರಗಳು ತಮ್ಮ ಪ್ರದೇಶಕ್ಕೆ ತಕ್ಕಂತೆ ಒಳ ಮೀಸಲಾತಿ ಕಲ್ಪಿಸಲು ಸ್ವತಂತ್ರವಾಗಿವೆ ಎಂದು ಸಹ ಸುಪ್ರೀಂ ಕೋರ್ಟ್ ಹೇಳಿದೆ. ಆದ್ದರಿಂದ ಕೂಡಲೇ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‍ನ ಆದೇಶವನ್ನು ತP್ಷÀಣ ಜಾರಿ ಮಾಡಬೇಕು. ಮುಖ್ಯಮಂತ್ರಿ ಹಾಗೂ ಕಾನೂನು ಮಂತ್ರಿ ಈ ನಿಟ್ಟಿನಲ್ಲಿ ತP್ಷÀಣ ಕಾರ್ಯಪ್ರವೃತ್ತರಾಗಿ ಕೆಲಸ ಮಾಡಬೇಕೆಂದು ಎಂದು ಅವರು ಒತ್ತಾಯಿಸಿದರು.
ನಿಂಗಪ್ಪ ಹತ್ತಿಮನಿ, ಗೋಪಾಲ ದಾಸನಕೇರಿ, ಸ್ವಾಮಿ ದೇವದಾಸನಕೇರಿ, ಗಣೇಶ ದುಪ್ಪಲಿ, ಮಲ್ಲಣ್ಣ ದಾಸನಕೇರಿ, ಶಾಂತರಾಜ ಮೋಟ್ಟನಳ್ಳಿ, ಕಾಶೆಪ್ಪ ಗೆಣ್ಣಬೇರಿ, ಚನ್ನಯ್ಯ ಮಾಳಿಕೇರಿ, ನಿಂಗಪ್ಪ ವಡ್ನಳ್ಳಿ, ಅಂಜನೇಯ ಬಬಲಾದ, ಯಲ್ಲಪ್ಪ ಮಾಳಿಕೇರಿ, ಪರಮರೆಡ್ಡಿ ಕಂದಕೂರï, ಶಾಮ ಕಣೆಕಲï, ಮಲ್ಲಿಕಾರ್ಜುನ ರಾಮಸಮುದ್ರ, ಹಣಮಂತಿ ಇಟಗಿ, ಮೈಲಾರಿ ಜಾಗಿರದಾರï, ಶರಣಪ್ಪ ಗಾಡಿ, ಮಹಾದೇವಪ್ಪ ದದ್ದಲï, ಭಿಮರಾಐ ಲಿಂಗೇರಿ, ಹಣಮಂತ ಲಿಂಗೇರಿ, ನಾಗರಾಜ ಇಟೇಕರï, ಅಭಿಷೇಕ ದಾಸನಕೇರಿ, ನಾಗರಾಜ ಸಿ ದಾಸನಕೇರಿ, ಕೃಷÐ ದಾಸನಕೇರಿ, ರಾಜು ಕಡೇಚೂರï, ಸಾಬಣ್ಣ ಸೈದಾಪುರï, ಅನೀಲï ಬೆಳಗುಂದಿ, ಹಣಮಂತ ಸೌರಾಷ್ಟ್ರಹಳ್ಳಿ, ಮಲ್ಲು ಬಬಲಾದ, ಹಣಮಂತ ಅಚ್ಚೋಲಿ, ಶಾಂತಪ್ಪ ಖಾನಳ್ಳಿ, ಮಲ್ಲಿಕಾರ್ಜುನ ಮುದ್ನೂರï, ವೆಂಕಟೇಶ ದಾಸನಕೇರಿ ಸೇರಿದಂತೆ ಮತ್ತಿತರರು