

ಬಳ್ಳಾರಿ : ಸದೃಢ ಆರೋಗ್ಯಕ್ಕಾಗಿ ಬಳ್ಳಾರಿ ಸೈಕ್ಲಿಸ್ಟ್ ಮತ್ತು ರನ್ನರ್ಸ್ ಫೌಂಡೇಶನ್ ವತಿಯಿಂದ ಮೂರನೇ ವರ್ಷದ ‘ ಸ್ಟೀಲ್ ಸಿಟಿ ರನ್ ಕಾರ್ಯಕ್ರಮವನ್ನು ಆ. 4 ರಂದು ಆಯೋಜಿಸಲಾಗಿದೆ ಎಂದು ಫೌಂಡೇಶನ್ ಅಧ್ಯಕ್ಷ ಡಾ. ರವಿಶಂಕರ ಸಜ್ಜಲ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಇಲ್ಲಿನ ಮೋಕಾ ರಸ್ತೆಯಲ್ಲಿನ ವಿಸ್ಡಮ್ ಲ್ಯಾಂಡ್ ಶಾಲೆಯ ಮೈದಾನದಲ್ಲಿ ಪ್ರಾರಂಭವಾಗಲಿದೆ. ಮೈಂಡ್ ಟ್ರೀ ಸಹ ಸಂಸ್ಥಾಪಕ ಪಾರ್ಥ ಸಾರಥಿ, ಆಶ್ವ ಫಿಟ್‌ನೆಸ್ ಕ್ಲಬ್ ಸಿಇಒ ಆರ್.ಕೆ. ಮೂರ್ತಿ ರಾಯಭಾರಿಗಳಾಗಿದ್ದಾರೆ. 2022ರ ಮೊದಲ ವರ್ಷದ ಓಟದಲ್ಲಿ 1100 ಜನರು ಹಾಗೂ 2023 ರಲ್ಲಿ 2500ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಈ ವರ್ಷ ಮೂರು ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. 10 ಕಿ.ಮೀ. ಓಟ ಸ್ಪರ್ಧಾತ್ಮಕ ಸವಾಲು, ಐದು ಕಿ.ಮೀ. ಓಟ ಅನುಭವಿ ಮತ್ತು ಅನನುಭವಿ ಓಟ ಹಾಗೂ ಮೂರು ಕಿ.ಮೀ. ಓಟಕ್ಕೆ ಹೊಸಬರಿಗೆ ಮತ್ತು ನೋಡುತ್ತಿರುವರರಿಗೆ ಮೋಜಿನ ಸ್ಪರ್ಧಾತ್ಮಕವಲ್ಲದ ಓಟ ಎಂದು ವಿಭಾಗಿಸಲಾಗಿದೆ. ಹತ್ತು ಕಿ.ಮೀ ಓಟಕ್ಕೆ 500 ರೂ., ಐದು ಕಿ.ಮೀ ಓಟಕ್ಕೆ 400 ರೂ. ಹಾಗೂ 3 ಕಿ.ಮೀ. ಓಟಕ್ಕೆ 350 ರೂ. ಶುಲ್ಕ ನಿಗದಿ ಮಾಡಿದ್ದು, ಸ್ಟೀಲ್‌ಸಿಟಿರನ್ ವೆಬ್‌ನಲ್ಲಿ ನೊಂದಾಯಿಸಿಕೊಳ್ಳಬಹುದು. ಭಾಗವಹಿಸುವವರಿಗೆ ಟಿ - ಶರ್ಟ್ ಹಾಗೂ ಪ್ರತಿ ವಿಭಾಗಕ್ಕೆ ವಿಶಿಷ್ಟವಾದ ಫಿನಿಶರ್‌ಗಳಿಗೆ ಪದಕಗಳು ವಿತರಿಸಲಾಗುವುದು. ತುರ್ತು ಸಂದರ್ಭಗಳಲ್ಲಿ ಅರೆವೈದ್ಯರ ಸೇವೆಗಳು ಮತ್ತು ಅಂಬ್ಯುಲೆನ್ಸ್‌ಗಳ ಲಭ್ಯತೆ ಇರಲಿದೆ. ಜೆಎಸ್‌ಡಬ್ಲೂ, ಕಿಷ್ಕಿಂದಾ ವಿಶ್ವವಿದ್ಯಾಲಯ, ಮೋದಿ ಫೌಂಡೇಶನ್, ಎಸ್‌ಬಿಐ ಬ್ಯಾಂಕ್, ಬಿಕೆಎಸ್ ಫೌಂಡೇಶನ್ ಹಾಗೂ ಶ್ರೀ ನಂದಿ ಶಿಕ್ಷಣ ಮತ್ತು ಚಾರಿಟೇಬಲ್ ಟ್ರಸ್ಟ್ ಸೇರಿದಂತೆ ಹಲವಾರು ಸಂಸ್ಥೆಗಳು ಪಾಲುದಾರಿಕೆ ಹೊಂದಿವೆ. ಈ ಓಟದಲ್ಲಿ ದೇಶದ ವಿವಿಧ ರಾಜ್ಯಗಳ ಓಟಗಾರರು ಸ್ಪರ್ಧಿಸುವವರು ಎಂದರು.
ಪ್ರಮುಖರಾದ ಉಪಾಧ್ಯಕ್ಷೆ ಶೃತಿ ಕೊಂಡೆ, ಕಾರ್ಯದರ್ಶಿ ಸಂದೀಪ್ ಕುಮಾರ ಶರ್ಮ, ಮಾರ್ಗದರ್ಶಕರಾದ ಡಾ.ಬಿ.ಕೆ. ಸುಂದರ, ಡಾ. ಎಸ್.ಎಂ. ಸೋಮನಾಥ, ವೈ.ಜೆ. ಪೃಥ್ವಿ ರಾಜ್ ಭೂಪಾಲ್ ಇತರರಿದ್ದರು.