ಮೂರನೇ ಬಾರಿಗೆ ಯಲಿಗಾರ ಅವಿರೋಧ ಆಯ್ಕೆ

web1
Published on

ಮುನವಳ್ಳಿ: ದಿ. ಸವದತ್ತಿ ತಾಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಗೆ ಇತ್ತೀಚಿಗೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ನಿಯಮಿತ ಬೆಂಗಳೂರು ನಿರ್ದೇಶಕ, ಮುನವಳ್ಳಿ ಪಟ್ಟಣದ ರವೀಂದ್ರ ಭೂಪಾಲಪ್ಪ ಯಲಿಗಾರ ಸತತ ಮೂರನೇ ಬಾರಿಗೆ ಆಡಳಿತ ಮಂಡಳಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ವೀರನಗೌಡ ಸಂಗಣ್ಣವರ ಸೇರಿ 14 ಜನ ಸದಸ್ಯರು ಅವಿರೋಧ ಆಯ್ಕೆಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net