ಮೂರನೇ ಬಾರಿಗೆ ಗದ್ದುಗೆಗೇರಿದ ಅನುಸಬಾಯಿ

PH 01
Published on

ಚಿಂಚೋಳಿ: ಹಲಚೇರಾ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಅನುಸಬಾಯಿ ತೇಗಲತಿಪ್ಪಿ ಮೂರನೇ ಬಾರಿಗೆ ಹುದ್ದೆಗೇರಿದ್ದು, ಇದಲ್ಲದೆ ನಿರಂತರವಾಗಿ 5 ಬಾರಿ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಆನಂದ ರಟಕಲ್ ಆಯ್ಕೆಯಾದರು.

ಗ್ರಾಪಂ ಕಚೇರಿಯಲ್ಲಿ ಶುಕ್ರವಾರ ಆಯ್ಕೆ ಪ್ರಕ್ರಿಯೆ ನಡೆಯಿತು. ಒಟ್ಟು 28 ಸದಸ್ಯರಿದ್ದು, ಅಧ್ಯಕ್ಷ ಸ್ಥಾನ ಎಸ್‌ಸಿ ಮಹಿಳೆ ಹಾಗೂ ಉಪಾಧ್ಯಕ್ಷ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಅನುಸಬಾಯಿ ಹಾಗೂ ಆನಂದ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು ಎಂದು ಚುನಾವಣಾಧಿಕಾರಿ ಸಂಗಯ್ಯ ಸ್ವಾಮಿ ತಿಳಿಸಿದರು.

ಪ್ರಮುಖರಾದ ಸಿದ್ರಾಮಪ್ಪ ತೇಗಲತಿಪ್ಪಿ, ಪ್ರಶಾಂತ, ಸಂಗಮೇಶ, ಸುರೇಶ, ನಾಗರಾಜ, ಮರೆಪ್ಪ, ಲಲಿತಾ, ಪ್ರೇಮಾ, ಸುಧಾರಾಣಿ, ಸೂರ್ಯಕಾಂತ ಕುಡ್ಡಳ್ಳಿ, ಅಂಬರಾವ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net