ಮೂರನೇ ದಿನದ ಆಟ ರದ್ದು

rajanagar
Published on

ಹುಬ್ಬಳ್ಳಿ: ಇಲ್ಲಿಯ ರಾಜನಗರ ಕೆಎಸ್​ಸಿಎ ಮೈದಾನದಲ್ಲಿ ನಡೆಯುತ್ತಿರುವ ಭಾರತ ಹಾಗೂ ನ್ಯೂಜಿಲೆಂಡ್ ಎ ತಂಡಗಳ ನಡುವಿನ 2ನೇ ಚತುರ್ದಿನ ಟೆಸ್ಟ್ ಕ್ರಿಕೆಟ್ ಪಂದ್ಯದ 3ನೇ ದಿನದ ಆಟ ಒಂದೂ ಎಸೆತ ಕಾಣದೇ ರದ್ದುಗೊಂಡಿತು.

ಶುಕ್ರವಾರ ರಾತ್ರಿ ಹಾಗೂ ಶನಿವಾರ ದಿನವೀಡಿ ಕಾಡಿದ ಮಳೆಯಿಂದ ಅಂಪೈರ್​ಗಳು 3ನೇ ದಿದ ಆಟವನ್ನು ರದ್ದು ಮಾಡುವ ನಿರ್ಧಾರಕ್ಕೆ ಬಂದರು. ಪಂದ್ಯದ ಮೊದಲ ದಿನದ ಆಟ ಸಹ ಸಂಪೂರ್ಣವಾಗಿ ರದ್ದುಗೊಂಡಿತ್ತು.

2ನೇ ದಿನ ಆಡಲು ಸಾಧ್ಯವಾದ 66 ಓವರ್ ಗಳಲ್ಲಿ ಭಾರತ ಎ ತಂಡ ಪ್ರಥಮ ಇನ್ನಿಂಗ್ಸ್​ನಲ್ಲಿ 6 ವಿಕೆಟ್​ಗೆ 229 ರನ್​ಗಳಿಸಿತ್ಥು. ಪಂದ್ಯಕ್ಕೆ ಭಾನುವಾರ ಕೊನೆಯ ದಿನವಾಗಿದೆ. ಬೆಂಗಳೂರಿನಲ್ಲಿ ನಡೆದ ಮೊದಲ ಚತುರ್ದಿನ ಟೆಸ್ಟ್ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿತ್ತು. 2ನೇ ಚತುರ್ದಿನ ಪಂದ್ಯವೂ ಡ್ರಾನಲ್ಲಿ ಕೊನೆಗೊಳ್ಳುವುದು ನಿಶ್ಚಿತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net