ಮೂರನೇ ದಿನ ಮುಂದುವರೆದ ಪ್ರತಿಭಟನೆ

1672832074492
Published on

ಕೆ.ಆರ್.ಸಾಗರ: ಕೆ.ಆರ್.ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ನೀರ್ದೆಶಕರು ಹಾಗೂ ಗ್ರಂಥ ಪಾಲಕರ ಹುದ್ದೆ ರದ್ದು ಮಾಡಿ ಅವರನ್ನು ವರ್ಗಾವಣೆ ಮಾಡಿರುವ ಆದೇಶ ಹಿಂಪಡೆಯುವಂತೆ ಒತ್ತಾಯಿಸಿ ಕಾಲೇಜಿನ ಮುಂಭಾಗದಲ್ಲಿ ವಿದ್ಯಾರ್ಥಿಗಳು ನಡೆಯುತ್ತಿರುವ ಪ್ರತಿಭಟನೆ ಬುಧವಾರ ಮೂರನೇ ದಿನವೂ ಮುಂದುವರೆದಿದೆ.


ಕಾಲೇಜು ಮುಂಭಾಗದಲ್ಲಿ ಉನ್ನತ ಶಿಕ್ಷಣ ಇಲಾಖೆ ನಡೆ ಖಂಡಿಸಿದ ಭಿತ್ತಿಪತ್ರಗಳನ್ನು ಹಿಡಿದು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.

ಗ್ರಾಮೀಣ ಭಾಗದಲ್ಲಿ ಕೋಟ್ಯಂತರ ರೂ. ವ್ಯಯಿಸಿ ಕಟ್ಟಡ ನಿರ್ಮಿಸಿ ಬಿ.ಕಾಂ ಮತ್ತು ಬಿ.ಎ ತರಗತಿಗಳು ನಡೆಯುತ್ತಿವೆ. ದೈಹಿಕ ಶಿಕ್ಷಣ ಪದವಿ ತರಗತಿಯಲ್ಲಿ ಒಂದು ವಿಷಯವಾಗಿದೆ. ಹೆಚ್ಚಿನ ವಿಷಯ ತಿಳಿಯಲು ಗ್ರಂಥಾಲಯ ಅವಶ್ಯಕತೆ ಇದೆ. ವಿದ್ಯಾರ್ಥಿಗಳು ಕಡಿಮೆ ಇದ್ದಾರೆ ಎಂಬ ನೆಪ ಹೊಡ್ಡಿ ದೈಹಿಕ ಶಿಕ್ಷಣ ನಿರ್ದೇಶಕ ಮತ್ತು ಗ್ರಂಥಾಪಾಲಕರ ಹುದ್ದೆ ರದ್ದುಪಡಿಸಿದ್ದು ಎಷ್ಟರ ಮಟ್ಟಿಗೆ ಸರಿ? ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಕೂಡಲೇ ಆದೇಶ ರದ್ದು ಪಡಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಗಾಂಧಿಯವರ ಆರ್ದಶದಂತೆ ಉಪವಾಸ ಸತ್ಯಾಗ್ರಹ ನಡೆಸಬೇಕಾಗುತ್ತದೆ ಎಂದು ವಿದ್ಯಾರ್ಥಿ ಮುಂಖಂಡ ಮನೋಜ್ ಎಚ್ಚರಿಸಿದರು.

ಹೃತ್ವಿಕ್, ಅನನ್ಯ, ಸೌಭಾಗ್ಯ ಸೇರಿದಂತೆ ಎಲ್ಲ ವಿದ್ಯಾರ್ಥಿಗಳು ಪ್ರತಿಬಟನೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net