

ಕಳಸ: ಹಿರೇಬೈಲ್ ಕೋರೆ ಗ್ರಾಮದ ಜ್ಯೋತಿಕುಮಾರ್ ಅವರ ಮೂತ್ರಪಿಂಡ ನಿಷ್ಕ್ರಿಯಗೊಂಡಿದ್ದು ಮೂತ್ರಪಿಂಡ ಬದಲಾವಣೆಗೆ ಧನಸಹಾಯದ ನಿರೀಕ್ಷೆಯಲ್ಲಿದ್ದಾರೆ. ವಾಹನ ಚಾಲಕ ಜ್ಯೋತಿಕುಮಾರ್ ಅವರ ಕಾಲುಗಳು ತಿಂಗಳ ಹಿಂದೆ ಊದತೊಡಗಿದ್ದು ಕಾರ್ಕಳ ಹಾಗೂ ಮಡಿಕೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ವಾಸಿಯಾಗಲಿಲ್ಲ. ದೇರಳಕಟ್ಟೆ ಆಸ್ಪತ್ರೆಯೊಂದರಲ್ಲಿ ತಪಾಸಣೆ ಮಾಡಿಸಿದಾಗ ಮೂತ್ರಪಿಂಡಗಳು ನಿಷ್ಕ್ರಿಯಗೊಂಡಿರುವುದಾಗಿ ತಿಳಿಸಿದರು. ಇದರಿಂದಾಗಿ ಜ್ಯೋತಿಕುಮಾರ್ ಕುಟುಂಬ ಆಘಾತಕ್ಕೆ ಒಳಗಾಗಿದೆ. ಡಯಾಲಿಸಿಸ್ ಮಾಡಲಾಗುತ್ತಿದ್ದು ಜ್ಯೋತಿಕುಮಾರ್ ಅವರ ಮೂತ್ರಪಿಂಡ ಬದಲಾಯಿಸಬೇಕು ಅಥವಾ ಜೀವನ ಪರ್ಯಂತ ಡಯಾಲಿಸಿಸ್ ಮಾಡಿಸುತ್ತಿರಬೇಕು ಎಂದು ವೈದ್ಯರು ತಿಳಿಸಿದ್ದಾರೆ. ಮೂತ್ರಪಿಂಡ ನೀಡಲು ಜ್ಯೋತಿಕುಮಾರ್ ಕುಟುಂಬದ ಸದಸ್ಯರು ಮುಂದೆ ಬಂದಿದ್ದು ಇದಕ್ಕೆ ಸುಮಾರು 10 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.
ಜ್ಯೋತಿಕುಮಾರ್ ಪತ್ನಿ ಕೂಲಿ ಕೆಲಸ ಮಾಡುತ್ತಾರೆ. ಇವರಿಗೆ ಇಬ್ಬರು ಮಕ್ಕಳಿದ್ದು ಕೂಲಿ ಕೆಲಸದಿಂದಲೇ ಜೀವನ ನಿರ್ವಹಣೆ ಮಾಡಬೇಕು. ಹೀಗಾಗಿ ಬಡ ಕುಟುಂಬಕ್ಕೆ ಆರ್ಥಿಕ ನೆರವಿನ ಅಗತ್ಯವಿದೆ.
ನೆರವು ನೀಡುವವರು ಜ್ಯೋತಿಕುಮಾರ್ ಅವರ ಬ್ಯಾಂಕ್ ಆಫ್ ಬರೋಡಾದ ಹಿರೇಬೈಲ್ ಶಾಖೆ ಖಾತೆ ಸಂಖ್ಯೆ: 63710100004673. ಐಎಫ್ಎಸ್ಸಿ ಸಂಖ್ಯೆ: ಬಿಎಆರ್ಬಿ 0ವಿಜೆಎಚ್ಐಆರ್ಇಗೆ ಹಣ ಸಂದಾಯ ಮಾಡಬಹುದು. ಜ್ಯೋತಿಕುಮಾರ್ ಅವರ ಮೊಬೈಲ್ ಸಂಖ್ಯೆ:9483076692.