

ವಿಜಯಪುರ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು, ವಿಜಯಪುರ ಜಿಲ್ಲೆಯ ತಾಲೂಕು ಪದಾಧಿಕಾರಿಗಳ ಸಭೆ ನಡೆಸಲಾಯಿತು. ವಿಜಯಪುರ ನಗರದ ನಿರ್ವಾಣಶೆಟ್ಟಿ ಲೇಔಟ್ ನಲ್ಲಿರುವ ಜಿಲ್ಲಾ ಪರಿಷತ್ ಕಚೇರಿಯಲ್ಲಿ ಸಭೆ ನಡೆಯಿತು. ಸಮಾಜದಲ್ಲಿನ ಮೌಢ್ಯತೆ ನಿರ್ಮೂಲನೆಯಲ್ಲಿ ಪರಿಷತ್ತಿನ ಪಾತ್ರ ಹಾಗೂ ಪರಿಷತ್ತಿನ ಬೆಳವಣಿಗೆಯ ಬಗ್ಗೆ ಚರ್ಚಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪ್ರೇಮಾನಂದ ಬಿರಾದಾರ ಅವರು ಮಾತನಾಡಿ ಪರಿಷತ್ತು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ, ಮೂಡನಂಬಿಕೆ ನಿರ್ಮೂಲನೆಗಾಗಿ ಹಳ್ಳಿಹಳ್ಳಿಗೂ ಕೂಡ ಪರಿಷತ್ತಿನ ಕಾರ್ಯಕ್ರಮ ಅಗತ್ಯವಿದೆ. ಈ ಸಮಾಜಮುಖಿ ಕಾರ್ಯ ತ್ವರಿತಗತಿಯಲ್ಲಿ ಸಾಗಲಿ ಎಂದು ಹೇಳಿದರು. ಪರಿಷತ್ ಜಿಲ್ಲಾಧ್ಯಕ್ಷ ಪರಮಾನಂದ ನಿರ್ವಾಣಶೆಟ್ಟಿ ಮಾತನಾಡಿ ಸಮಾಜದಲ್ಲಿನ ಮೌಢ್ಯತೆ ನಿರ್ಮೂಲನೆ ಮಾಡುವುದೇ ಪರಿಷತ್ತಿನ ಗುರಿ ಎಂದು ಹೇಳಿದರು. ಕಾರ್ಯಕ್ರಮದಲ್ಲಿ
ಜಿಲ್ಲಾ ಗೌರವಾಧ್ಯಕ್ಷರಾದ ಪ್ರೇಮಾನಂದ ಬಿರಾದಾರ, ಅತಿಥಿ ಸಂತೋಷ ತಳಕೇರಿ, ಜಿಲ್ಲಾಧ್ಯಕ್ಷ ಪರಮಾನಂದ ನಿರ್ವಾಣಶೆಟ್ಟಿ. ಪ್ರಧಾನ ಕಾರ್ಯದರ್ಶಿ ಬಸವರಾಜ ಬಾಗೇವಾಡಿ, ಉಪಾಧ್ಯಕ್ಷ ವಿಶ್ವಕರ್ಮ ದೊಡ್ಡಪತ್ತಾರ, ಸಹ ಕಾರ್ಯದರ್ಶಿ ಸುನೀಲ್ ಗೋಡನವರ, ನಿರ್ದೇಶಕರಾದ ಶಶಿಕಾಂತ ಮೆಂಡೆಗಾರ, ಆನಂದ ಬಾಗಾದಿ, ಸಭೆಯಲ್ಲಿ ಹಾಜರಿದ್ದರು. ಮೂಢ ನಂಬಿಕೆ ಹೋಗಲಾಡಿಸುವ ಕುರಿತು ಕೈಗೊಳ್ಳಬೇಕಾದ ಜನಜಾಗೃತಿ, ಕೆಲಸ ಕಾರ್ಯಗಳ ಬಗ್ಗೆ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು. ಬಳಿಕ ವಿವಿಧ ತಾಲೂಕುಗಳ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ವಿಜಯಪುರ ತಾಲೂಕಿನ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಚಟ್ಟೇರ, ಕಾರ್ಯದರ್ಶಿಯಾಗಿ ಶಿವಯ್ಯ ಹಿರೇಮಠ, ಕೋಶಾಧ್ಯಕ್ಷರಾಗಿ ಸಂಗನಗೌಡ ಪಾಟೀಲ, ಕೊಲ್ಹಾರ ತಾಲೂಕಿನ ಅಧ್ಯಕ್ಷರಾಗಿ ಬಸವರಾಜ ಉಳ್ಳಾಗಡ್ಡಿ, ಚಡಚಣ ತಾಲೂಕಿನ ಅಧ್ಯಕ್ಷರಾಗಿ ಬಾಬಾಸಾಹೇಬ ಸಾವಂತ, ಕಾರ್ಯದರ್ಶಿಯಾಗಿ ಶ್ರೀಶೈಲ ಜವಳಗಿ, ಸಿಂದಗಿ ತಾಲೂಕು ಅಧ್ಯಕ್ಷರಾಗಿ ಗೌಡಪ್ಪ ಬಗಲಿ ಅವರನ್ನು ಆಯ್ಕೆ ಅಡಲಾಯಿತು. ಜಿಲ್ಲಾ ಸಮಿತಿಯ ಪದಾಧಿಕಾರಿಗಳ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ಮಾಡಲಾಯಿತು. ಕಾರ್ಯಕ್ರಮಕದ ಸ್ವಾಗತವನ್ನು ಬಸವರಾಜ ಹಡಪದ ಹಾಗೂ ವಂದನಾರ್ಪಣೆಯನ್ನು ಆನಂದ ಭಾಗಾದಿ ನೆರವೇರಿಸಿದ್ರು.