ಮೂಡಿಗೆರೆಯಲ್ಲಿ ಕರಗಕ್ಕೆ ಚಾಲನೆ

mdg karaga
ಮೂಡಿಗೆರೆಯಲ್ಲಿ ಕರಗ ಮೂರ್ತಿ ಮೆರವಣಿಗೆ ಮಾಡಲಾಯಿತು.
Published on

ಮೂಡಿಗೆರೆ: ಪಟ್ಟಣದ ಕೆ.ಆರ್.ರಸ್ತೆಯಲ್ಲಿ ಇತಿಹಾಸ ಪ್ರಸಿದ್ಧ ಶ್ರೀ ಲೋಕದ ಮಾರಿಯಮ್ಮ ಕರಗ ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಲಾಯಿತು.

ಏ.20ರವರೆಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ದೇವರ ಮೂರ್ತಿಯನ್ನು ಹೊತ್ತು ಸಂಚರಿಸಿ ಭಕ್ತಾದಿಗಳಿಂದ ಪೂಜೆ ಸ್ವೀಕರಿಸಲಾಗುವುದು. 19ರಂದು ಸಂಜೆ ಮಾರ್ಕೇಟ್ ರಸ್ತೆಯ ಶ್ರೀ ಆದಿಶಕ್ತಿ ದೇವಾಲಯದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ, 20ರಂದು ಮಧ್ಯಾಹ್ನ ವಿಶೇಷ ಪೂಜೆ, ಅಂಬಲಿ ಪ್ರಸಾದ ವಿತರಣೆ, ಸಂಜೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಕರಗದಲ್ಲಿ ವಿ.ಗೋಪಾಲ, ವೇಲಾಯುಧ, ಶೇಖರ್, ದೀಪು, ಶರವಣ, ನವಿನ, ಮಹೇಶ್, ಶಿವ, ಮಣಿ, ರಾಜ, ಕುಮಾರ, ನಾಗರಾಜ್, ಶರತ್, ಜಗದೀಶ್, ಲೋಕೇಶ್, ಸುಮಂತ್, ಅನಿಲ್, ಅಣ್ಣಾದೊರೈ ಪಾಲ್ಗೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net