ಮೂಡಿಗೆರೆ ತಾಪಂ ನೂತನ ಅಧ್ಯಕ್ಷೆ ಭಾರತಿ

10mdg-p1
Published on

ಮೂಡಿಗೆರೆ: ತಾಪಂನ ಕೊನೆಯ ಆರು ತಿಂಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಬಿದರಹಳ್ಳಿ ಕ್ಷೇತ್ರದ ಭಾರತಿ ರವೀಂದ್ರ ಗುರುವಾರ ಅವಿರೋಧವಾಗಿ ಆಯ್ಕೆಯಾದರು.

ಬಿಳಗುಳ ಕ್ಷೇತ್ರದ ಕೆ.ಸಿ.ರತನ್ ನಾಲ್ಕೂವರೆ ವರ್ಷಗಳ ಕಾಲ ಅಧ್ಯಕ್ಷರಾಗಿದ್ದರು. ಪಕ್ಷದ ತೀರ್ವನದಂತೆ ನ.9ರಂದು ರಾಜೀನಾಮೆ ನೀಡಿದ್ದು, ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದು, ಪಕ್ಷದ ಕೋರ್ ಕಮಿಟಿ ತೀರ್ವನದಂತೆ ಭಾರತಿ ರವೀಂದ್ರ ಅವರನ್ನು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಗೋಣಿಬೀಡು ಸದಸ್ಯ ಸುಂದರ್​ಕುಮಾರ್, ತ್ರಿಪುರ ಸದಸ್ಯ ಬಿ.ಎಲ್.ದೇವರಾಜು, ಬಣಕಲ್ ಸದಸ್ಯೆ ವೀಣಾ ಉಮೇಶ್, ಸಂಸೆ ಸದಸ್ಯೆ ಮೀನಾಕ್ಷಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಪೈಪೋಟಿ ನಡೆಸಿದ್ದರು. ಆದರೆ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಈ ಹಿಂದೆ ತೆಗೆದುಕೊಂಡ ತೀರ್ವನದಂತೆ ಭಾರತಿ ರವೀಂದ್ರ ಅವರ ಹೆಸರನ್ನು ಫೈನಲ್ ಮಾಡಲಾಯಿತು.

ಗುರುವಾರ ಬೆಳಗ್ಗೆ 11.30ಕ್ಕೆ ಭಾರತಿ ರವೀಂದ್ರ ಒಬ್ಬರೇ ನಾಮಪತ್ರ ಸಲ್ಲಿಸಿದರು. ಹೀಗಾಗಿ ಚುನಾವಣಾಧಿಕಾರಿ ಎಚ್.ಎಲ್.ನಾಗರಾಜು ಅವರು ಆಯ್ಕೆ ಘೊಷಿಸಿದರು.

ಬಿಜೆಪಿ ತಾಲೂಕು ಅಧ್ಯಕ್ಷ ಜೆ.ಎಸ್.ರಘು, ಜಿಪಂ ಸದಸ್ಯೆ ಸುಧಾ ಯೋಗೇಶ್, ತಾಪಂ ಉಪಾಧ್ಯಕ್ಷೆ ಪ್ರಮೀಳಾ, ಸದಸ್ಯರಾದ ಕೆ.ಸಿ.ರತನ್, ರಂಜನ್ ಅಜಿತ್​ಕುಮಾರ್, ಬಿ.ಎಲ್.ದೇವರಾಜು, ಸುಂದರ್​ಕುಮಾರ್, ಸವಿತಾ ರಮೇಶ್, ಮೀನಾಕ್ಷಿ, ವೇದಾವತಿ, ಪಪಂ ಅಧ್ಯಕ್ಷ ಪಿ.ಜಿ.ಅನುಕುಮಾರ್, ಸದಸ್ಯೆ ಆಶಾ ಮೋಹನ್, ಮುಖಂಡರಾದ ದುಂಡುಗ ಪ್ರಮೋದ್, ಹಳಸೆ ಶಿವಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net