

ಮೂಡಲಗಿ: ಪಟ್ಟಣದ ಪುರಸಭೆಯ ಎರಡನೇ ಅವಧಿಗೆ ಬುಧವಾರ ಜರುಗಿದ ಚುನಾವಣೆ ಪ್ರಕ್ರಿಯೆಲ್ಲಿ ನೂತನ ಅಧ್ಯೆಯಾಗಿ ಖುರ್ಷಾದ್ ಅನ್ವರ್ ನದ್ಾ ಹಾಗೂ ಉಪಾಧ್ಯೆಯಾಗಿ ಭೀಮವ್ವ ಪೂಜೇರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬುಧವಾರ ಜರುಗಿದ ಮೂಡಲಗಿ ಪುರಸಭೆ ಅಧ್ಯ&ಉಪಾಧ್ಯ ಸ್ಥಾನಗಳಿಗೆ ತಲಾ ಒಂದೊಂದು ನಾಮಪತ್ರ ಸಲ್ಲಿಕೆಯಾಗಿತ್ತು. ಆದರೇ ಕೊನೆಯ ಣಗಳಲ್ಲಿ ಜೆಡಿಎಸ್ ಅಭ್ಯರ್ಥಿ ಸತ್ಯವ್ವ ಅರಮನಿ ಅಧ್ಯ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರಿಂದ ಕೈಎತ್ತುವ ಮೂಲಕ ಮತದಾನ ಜರುಗಿತು. ಅವಿರೋಧವಾಗಿ ಭೀಮವ್ವ ಪೂಜೇರಿಯನ್ನು ಉಪಾಧ್ಯೆಯನ್ನಾಗಿ ಆಯ್ಕೆ ಮಾಡಲಾಯಿತು. ಸಾಮಾನ್ಯ ವರ್ಗದ ಮಹಿಳೆಗೆ ಅಧ್ಯ ಸ್ಥಾನ, ಉಪಾಧ್ಯ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಿತ್ತು. ಅನ್ವರ್ ನದ್ಾಗೆ 16 ಜನ ಕೆ ಎತ್ತಿ ಮತದಾನ ಮಾಡಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ಸತ್ಯವ್ವ ಅರಮನಿ 2 ಮತ ಪಡೆದು ಸೋಲು ಅನುಭವಿಸಿದರು. ಐವರು ಸದಸ್ಯರು ಗೈರಾಗಿದ್ದರು. ಜೆಡಿಎಸ್ ಸದಸ್ಯರಿಗೆ ವಿಪ್ ಜಾರಿ ಮಾಡಲಾಗಿತ್ತು. ನೂತನ ಅಧ್ಯ&ಉಪಾಧ್ಯರನ್ನು ಸತ್ಕರಿಸಲಾಯಿತು. ಕಾರ್ಯಕರ್ತರು ಗುಲಾಲ್ ಎರಚಿ ವಿಜಯೋತ್ಸವ ಆಚರಿಸಿದರು.
ಚುನಾವಣಾಧಿಕಾರಿ ಮಹಾದೇವ ಸನ್ನಮುರಿ, ಶಿರಸ್ತೆದಾರ ಪರಶುರಾಮ ನಾಯಕ್, ಪುರಸಭೆ ಮುಖ್ಯಾಧಿಕಾರಿ ತುಕಾರಾಮ ಮಾದರ, ಆರೋಗ್ಯ ನಿರೀಕ ಚಿದಾನಂದ ಮುಗಳಖೋಡ, ಪುರಸಭೆ ಸದಸ್ಯರು, ಶಾಸಕರ ಆಪ್ತ ಸಹಾಯಕರಾದ ಡಿ.ಕೆ. ನಾಯಿಕ ಮತ್ತು ಸಿ.ಪಿ. ಯಕ್ಸಂಬಿ ಉಪಸ್ಥಿತರಿದ್ದರು.