ಮೂಡಲಗಿ ತಾಲೂಕಿನ ನಾಲ್ಕು ಬ್ರಿಡ್ಜ್​ ಮುಳುಗಡೆ

01
Published on

ಮೂಡಲಗಿ: ನಿರಂತರ ಮಳೆಯಿಂದ ಟಪ್ರಭಾ ನದಿಗೆ ಹರಿದು ಬರುತ್ತಿರುವ ನೀರಿನ ಪ್ರಮಾಣ ಹೆಚ್ಚಾಗಿ ತಾಲೂಕಿನ ನಾಲ್ಕು ಸೇತುವೆಗಳು ಮಂಗಳವಾರ ಮುಳುಗಡೆಯಾಗಿ ಸಂಚಾರ ಸ್ಥಗಿತಗೊಂಡಿದೆ. ಟಪ್ರಭಾ, ಹಿರಣ್ಯಕೇಶಿ, ಮಾರ್ಕಂಡೇಯ ಹಾಗೂ ಬಳ್ಳಾರಿ ನಾಲಾ ಸೇರಿ ಟಪ್ರಭಾ ನದಿಗೆ ಒಟ್ಟು 17,000 ಸಾವಿರ ಕ್ಯೂಸೆಕ್​ ನೀರು ಬರುತ್ತಿದ್ದು, ತಾಲೂಕಿನ ಅವರಾದಿ ಹಾಗೂ ಮಹಾಲಿಂಗಪುರಕ್ಕೆ ಸಂಪರ್ಕ ಕಲ್ಪಿಸುವ ಅವರಾದಿ ಸೇತುವೆ, ಸುಣಧೋಳಿ ಹಾಗೂ ಮೂಡಲಗಿಗೆ ಸಂಪರ್ಕ ಕಲ್ಪಿಸುವ ಸುಣಧೋಳಿ ಸೇತುವೆ, ವಡೇರಹಟ್ಟಿ ಹಾಗೂ ಉದಗಟ್ಟಿಗೆ ಸಂಪರ್ಕ ಕಲ್ಪಿಸುವ ವಡೇರಹಟ್ಟಿ ಸೇತುವೆ, ಕಮಲದಿನ್ನಿ ಹಾಗೂ ಹುಣಶ್ಯಾಳ ಪಿವೈಗೆ ಸಂಪರ್ಕ ಕಲ್ಪಿಸುವ ಕಮಲದಿನ್ನಿ ಸೇತುವೆ ಜಲಾವೃತಗೊಂಡಿವೆ. ಪರಿಣಾಮ ಸಂಚಾರ ಸ್ಥಗಿತಗೊಂಡು ಸಂಪರ್ಕ ಕಡಿತಗೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net