ಮೂಗೂರು ಕೆಪಿಎಸ್ ಶಾಲೆಯಲ್ಲಿ ಎಸ್‌ಡಿಎಂಸಿ ಸಮಿತಿ ಸಭೆ

20230812_111919
Published on

ಮೂಗೂರು: ದುಸ್ಥಿತಿಯಲ್ಲಿರುವ ಕೆಪಿಎಸ್ ಶಾಲಾ ಕಾಂಪೌಂಡ್, ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಗೃಹ, ಬಿಸಿಯೂಟ ತಯಾರಿಕೆಯ ತ್ಯಾಜ್ಯ ನೀರಿನ ಸಂಗ್ರಹಣೆಗೆ ಇಂಗುಗುಂಡಿ ನಿರ್ಮಾಣ ಮಾಡುವ ಕುರಿತು ಎಸ್‌ಡಿಎಂಸಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಇಲ್ಲಿನ ಕೆಪಿಎಸ್ ಶಾಲೆಯಲ್ಲಿ ಇತ್ತೀಚೆಗೆ ನಡೆದ ಪ್ರೌಢಶಾಲಾ ವಿಭಾಗದ ಎಸ್‌ಡಿಎಂಸಿ ಸಮಿತಿಯಲ್ಲಿ ಮೂಲಸೌಲಭ್ಯ ಕುರಿತು ಚರ್ಚಿಸಲಾಯಿತು. ಶಾಲೆಗೆ ಅಗತ್ಯ ಸೌಲಭ್ಯಗಳ ವಿಚಾರವನ್ನು ಸಚಿವರ ಗಮನಕ್ಕೆ ತಂದು ವಿಶೇಷ ಅನುದಾನ ಪಡೆಯುವ ಮೂಲಕ ಕೆಪಿಎಸ್ ಶಾಲೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸುವುದಾಗಿ ಶಾಲೆಯ ಉಪಾಧ್ಯಕ್ಷ ಸೋಮಣ್ಣ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಾಂಶುಪಾಲರಾದ ರಾಜಶ್ರೀ, ಸಮಿತಿ ಅಧ್ಯಕ್ಷ ಮಹಾದೇವಸ್ವಾಮಿ, ಶಾಲಾ ಮುಖ್ಯಸ್ಥರಾದ ಹನುಮಂತಪ್ಪ ತಳವಾರ್, ಉಪನ್ಯಾಸಕರಾದ ಮಹೇಶ್, ಪುಟ್ಟರಸ, ಸಮಿತಿ ಸದಸ್ಯ ಸ್ವಾಮಿ, ನಾಗರಾಜು, ಶಿವಣ್ಣ, ಪರಶಿವಮೂರ್ತಿ, ಗುರುಸ್ವಾಮಿ, ಸಿದ್ದರಾಜು, ಶಿವಶಂಕರ್, ಗಿರಿಜಾ, ಶಿಕ್ಷಕಿ ಕಾವೇರಿ ವೀಣಾ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net