ಮೂಗೂರಿನಲ್ಲಿ ಬಂಡಿ ಹರಿದು ಒಬ್ಬ ಸಾವು

Published on

ಚಾಮರಾಜನಗರ: ಮೂಗೂರು ತ್ರಿಪುರ ಸುಂದರಿ ಅಮ್ಮನವರ ಜಾತ್ರೆಯ ಅಂಗವಾಗಿ ಬಂಡಿ ಓಡಿಸುವ ಸಂದರ್ಭ ಚಕ್ರಕ್ಕೆ ಸಿಲುಕಿ ಒಬ್ಬರು ಮೃತಪಟ್ಟಿದ್ದಾರೆ.

ತಾಲೂಕಿನ ಕಮರವಾಡಿ ಗ್ರಾಮದ ನಿವಾಸಿ ಬಸವಣ್ಣ(50) ಮೃತ. ಜಾತ್ರೆಯ ಅಂಗವಾಗಿ ಕಮರವಾಡಿ ಗ್ರಾಮದಲ್ಲಿ ಸೋಮವಾರ ಬಂಡಿಯನ್ನು ಸಿಂಗಾರ ಮಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ನಂತರ ಮೂಗೂರಿನ ಅಮ್ಮನವರ ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕಿಸಲಾಗುತ್ತದೆ. ಈ ವೇಳೆ ಕಮರವಾಡಿ ಗ್ರಾಮದ ಬಸವಣ್ಣ ಮತ್ತು ಮಂಜುನಾಥ ಅವರು ಎತ್ತಿನ ನೊಗ ಹಿಡಿದು ಜತೆಯಲ್ಲೇ ಓಡುತ್ತಿದ್ದರು. ಎತ್ತಿನ ಹಗ್ಗ ಬಿಚ್ಚಿ, ನೊಗ ಕಳಚಿದಾಗ ಬಸವಣ್ಣ ಕೆಳಗೆ ಬಿದ್ದರು. ಆತನ ಮೇಲೆ ಬಂಡಿ ಹರಿದು ಸ್ಥಳದಲ್ಲೇ ಮೃತಪಟ್ಟರು. ಈ ಸಂದರ್ಭ ಮಂಜುನಾಥಗೆ ಗಂಭೀರ ಗಾಯಗಳಾಗಿವೆ. ಮೃತದೇಹವನ್ನು ಶವ ಪರೀಕ್ಷೆಗಾಗಿ ಚಾಮರಾಜನಗರ ವೈದ್ಯಕೀಯ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಸಂತೇಮರಹಳ್ಳಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net