ಮೂಗು ಸಂಬಂಧಿತ ಅಲರ್ಜಿ ಉಚಿತ ತಪಾಸಣೆ ಶಿಬಿರ

nose
Published on

ಬೆಳಗಾವಿ: ಕರ್ನಾಟಕ ಲಿಂಗಾಯತ ಶಿಕ್ಷಣ ಸಂಸ್ಥೆಯ ಶಹಾಪುರದಲ್ಲಿರುವ ಆಯುರ್ವೇದ ಆಸ್ಪತ್ರೆಯಲ್ಲಿ ಆಗಸ್ಟ್ 24 ರಿಂದ ಎರಡು ದಿನಗಳ ಕಾಲ ಬೆಳಗ್ಗೆ 9 ರಿಂದ 1-30 ಹಾಗೂ ಮಧ್ಯಾಹ್ನ 2-30 ರಿಂದ 5 ಗಂಟೆಯ ವರೆಗೆ ಮೂಗು ಸಂಬಂಧಿತ ಅಲರ್ಜಿಯ ಉಚಿತ ತಪಾಸಣೆ ಶಿಬಿರವನ್ನು ಏರ್ಪಡಿಸಲಾಗಿದೆ.ಈ ಶಿಬಿರದಲ್ಲಿ ಮೇಲಿಂದ ಮೇಲೆ ಸೀನು ಬುರುವುದು, ನೆಗಡಿ, ಮೂಗಿನ ಸಂಬಂಧಿತ ಅಲರ್ಜಿಯಿರುವ ರೋಗಿಗಳಿಗೆ ಉಚಿತ ಆಯುರ್ವೇದ ಸಲಹಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಆಸ್ಪತ್ರೆಯ ತಜ್ಞ ವೈದ್ಯರು ಉಚಿತ ಪರಿಕ್ಷೆಯನ್ನು ಮಾಡಿ ಸೂಕ್ತ ಸಲಹೆಯನ್ನು ನೀಡಲಿದ್ದಾರೆ. ಆಸಕ್ತರು ಈ ಶಿಬಿರದ ಪ್ರಯೋಜನೆಯನ್ನು ಪಡೆದುಕೊಳ್ಳಬೇಕೆಂದು ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net