

ಕೊಟ್ಟೂರು: ತಾಲೂಕಿನ ರಾಂಪುರ ಮತ್ತು ಚಿರಬಿ ಗ್ರಾಮದ ನಡುವೆ ಇರುವ ಶ್ರೀ ಮೂಗಬಸವೇಶ್ವರ ದೇವಾಲಯದಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ಪ್ರಯುಕ್ತ ಭಕ್ತರ ಸಹಕಾರದೊಂದಿಗೆ ಮುಜರಾಯಿ ಇಲಾಖೆಯಿಂದ ಪ್ರಸಾದ ವಿತರಣೆ ಆರಂಭಿಸಲಾಯಿತು.
ಈ ದೇವಾಲಯದ ಹಕ್ಕು ಪಡೆಯಲು ರಾಂಪುರ ಮತ್ತು ಚಿರಬಿ ಗ್ರಾಮಸ್ಥರು ಕೋರ್ಟ್ ಮೆಟ್ಟಿಲೇರಿದ್ದರಿಂದ ಪ್ರಸಾದ ವ್ಯವಸ್ಥೆ ಸ್ಥಗಿತವಾಗಿತ್ತು. 18 ವರ್ಷಗಳ ಬಳಿಕ ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಮುಜರಾಯಿ ಇಲಾಖೆ ದೇವಾಲಯವನ್ನು ಸುಪರ್ದಿಗೆ ಪಡೆದು ಪ್ರಸಾದ ವ್ಯವಸ್ಥೆ ಆರಂಭಿಸಿತು. ಡಾ.ಮೂಗಪ್ಪ ಹಾಗೂ ಸಣ್ಣ ಮೂಗಣ್ಣ ಕುಟುಂಬದವರು ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಿದರು.
ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಹನುಮಂತಪ್ಪ ಮಾತನಾಡಿ, ಇನ್ಮುಂದೆ ಪ್ರತಿ ಅಮಾವಾಸ್ಯೆಗೆ ಶ್ರೀ ಮೂಗಬಸವೇಶ್ವರ ದೇವರ ದರ್ಶನಕ್ಕೆ ಬರುವ ಭಕ್ತರಿಗೆ ಪ್ರಸಾದ ವ್ಯವಸ್ಥೆ ಇರುತ್ತದೆ, ಭಕ್ತರು ಸಹಕಾರ ನೀಡಬೇಕೆಂದರು.