

ತುಮಕೂರು: ಗುಬ್ಬಿ ತಾಲೂಕಿನ ಚೇಳೂರ ಹೋಬಳಿ ಮೂಗನಹುಣಸೆಯಲ್ಲಿ ಇಡಿಯೋಪಸ್ ಕನಸ್ಟ್ರಕ್ಟರ್ ಜಾತಿಯ ವಿರಳ ಜೇಡ ಪತ್ತೆಯಾಗಿದೆ. ಕರಾವಳಿ, ಮಲೆನಾಡು, ಅರೆಮಲೆನಾಡು ಭಾಗಗಳಲ್ಲಿ ಕಂಡುಬರುವ ಟ್ರಾ$್ಯಪಡೋರ್ ಜೇಡವು ಬಯಲು ಸೀಮೆಯಲ್ಲಿ ಪತ್ತೆಯಾಗಿರುವುದು ವಿಶೇಷ ಎನಿಸಿದೆ.
ಜನವಸತಿ ಪ್ರದೇಶದಲ್ಲಿ ಪತ್ತೆಯಾಗಿರುವ ಟ್ರಾ$್ಯಪಡೋರ್ ಜೇಡವು 1.5 ಇಂಚಿನಿಂದ 2 ಇಂಚಿನಷ್ಟು ಗ್ರಾತ ಇದ್ದು ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್.ನಾಯಕ ಹಾಗೂ ಪರಿಸರ ಪ್ರೇಮಿ ಎಂ.ಎಸ್.ಮಂಜುನಾಥ್ ಪತ್ತೆಹಚ್ಚಿದ್ದಾರೆ. ರಸ್ತೆಬದಿ ಮತ್ತು ಕಾಡಿನ ಬೆಟ್ಟ-ಗುಡ್ಡಗಳ ಕಡಿದಾದ ಇಳಿಜಾರಿನಲ್ಲಿ ಕಂಡುಬರುವ ಈ ಜೇಡವು ಕೊಳವೆಯಾಕರ ಗೂಡು ನಿಮಾರ್ಣ ಮಾಡಿಕೊಂಡು ವಾಸಿಸುತ್ತವೆ. ಗೂಡುಗಳು ಸುಂದರವಾದ ವೃತ್ತಾಕಾರದ ಮುಚ್ಚಳಿಕೆ ಹೊಂದಿರುತ್ತವೆ. ಹಳ್ಳಿಗಳಲ್ಲಿ ಈ ಜೇಡವನ್ನು ನೆಲಕಿರುಬನೆಂಬ ಹೆಸರಿನಿಂದ ಕರೆಯಲಾಗುತ್ತದೆ. ಮೈಮೇಲಿರುವ ಕೂದಲು ಮತ್ತು ಬೇಟೆಯಾಡುವ ರೀತಿಗೋ ಅಥವಾ ಬಿಲದಲ್ಲಿ ಅಡಗಿಕೊಳ್ಳುವ ಗುಣಲಕ್ಷಣಗಳಿಂದಾಗಿ ನೆಲಗುಮ್ಮನೆಂಬ ಹೆಸರು ಬಂದಿರಬಹುದು.
ರಾತ್ರಿ ಹೊತ್ತಿನಲ್ಲಿ ಬೇಟೆಯಾಡುವ ಟ್ರಾ$್ಯಪಡೋರ್ ಕಪ್ಪೆ, ಹಲ್ಲಿ, ಇಲಿ, ಸಣ್ಣ ಪಕ್ಷಿಗಳು ಮತ್ತು ಕೀಟಗಳನ್ನು ಬೇಟೆಯಾಡುತ್ತವೆ. ಈ ಜೇಡಗಳು ದೇಹವು ಇತರ ಜೇಡಗಳಿಗಿಂತ ದೊಡ್ಡ ದಾಗಿರುವ ಕಾರಣ ಅಪಾಯ ಬಂದಾಗ ಗೂಡಿನಲ್ಲಿ ಅಡಗುವುದು ಮತ್ತು ಪರ್ಯಾಯ ಮಾರ್ಗದಲ್ಲಿ ತಪ್ಪಿಸಿಕೊಳ್ಳುವುದನ್ನು ಬಿಟ್ಟರೆ ದೂರದ ಪ್ರದೇಶಕ್ಕೆ ಪಲಾಯನ ಮಾಡುವುದು ಕಷ್ಟಸಾಧ್ಯ. ಸಣ್ಣ ಪುಟ್ಟ ತೊಂದರೆಯ ಸಂಭವವು ಕಂಡುಬಂದಾಗ ಮೈಕೂದಲುಗಳನ್ನು ನೇರಮಾಡಿಕೊಂಡು ವಿಶೇಷ ಸದ್ದುಗಳನ್ನು ಮಾಡುವ ಮೂಲಕ ರಕ್ಷಿಸಿಕೊಳ್ಳುತ್ತವೆ.
ಈ ಹಿಂದೆ ಚೇಳೂರಿನಲ್ಲಿ ಸೂರ್ಯಚೇಡ ಪತ್ತೆಯಾಗಿತ್ತು. ಈಗ ವಿರಳ ಪ್ರಭೇದ ಟ್ರಾ$್ಯಪಡೋರ್ ಜೇಡ ಕಾಣಿಸಿಕೊಂಡಿದೆ. ಈ ಜೇಡಗಳು ನೈಸರ್ಗಿಕ, ರೈತರಿಗೆ ಉಪಯುಕ್ತವೆನಿಸಿವೆ. ಕೊಳವೆಯಾಕರದ ಗೂಡು ನಿರ್ಮಿಸುವುದರಿಂದ ಈ ಟ್ರಂಚಗಳ ಮೂಲಕ ಮಳೆ ನೀರು ನೈಸರ್ಗಿಕವಾಗಿ ಅಂತರ್ಜಲವನ್ನು ಸೇರಲು ಸಹಕಾರಿಯಾಗಿದೆ. ಅಲ್ಲದೆ, ರೈತರಿಗೆ ಮಾರಕ ಮತ್ತು ಅರಣ್ಯದ ಮರಗಳಿಗೆ ಪೀಡಕವಾದ ಕೀಟಗಳನ್ನು ಭಕ್ಷಿಸುವ ಮೂಲಕ ಕೀಟನಿಯಂತ್ರಣ ಮಾಡಿ ಪರಿಸರ ಸಮತೋಲನವನ್ನು ಟ್ರಾ$್ಯಪಡೋರ್ ಕಾಪಾಡುತ್ತವೆ ಎಂದು ಜೀವವೈವಿಧ ಸಂಶೋಧಕ ಮಂಜುನಾಥ
ಎಸ್ ನಾಯಕ ತಿಳಿಸಿದ್ದಾರೆ.