ಮೂಕ ಪ್ರಾಣಿಗಳನ್ನು ಬಿಡುವವರು ಮನೆಯ ಹೆಂಡತಿ, ಮಕ್ಕಳನ್ನು ಬಿಟ್ಟ ಹಾಗೆ !

Published on

ಮಂಗಳೂರು: ಈ ಸ್ಥಳದ ಆಸುಪಾಸಿನಲ್ಲಿ ನಾಯಿ ಹಾಗೂ ಇನ್ನಿತರ ಮೂಕ ಪ್ರಾಣಿಗಳನ್ನು ಬಿಡುವವರು ತಮ್ಮ ಮನೆಯ ಹೆಂಡತಿ, ಮಕ್ಕಳನ್ನು ಬಿಟ್ಟ ಹಾಗೆ...!
ಹೀಗೊಂದು ಬ್ಯಾನರ್ ಕುತೂಹಲ ಕೆರಳಿಸಿದೆ. ಸುಳ್ಯ ತಾಲೂಕಿನ ಗುತ್ತಿಗಾರು-ನಡುಗಲ್ಲು ರಸ್ತೆಯ ಹಾಲೆಮಜಲಿನಿಂದ ಮುಂದೆ ಕಾಡು ಪ್ರದೇಶದಲ್ಲಿ ವಿಶೇಷ ಬರಹವಿರುವ ಈ ಬ್ಯಾನರ್ ಕಂಡು ಬಂದಿದೆ. ಅದನ್ನು ಮೆಸ್ಕಾಂನವರ ವಿದ್ಯುತ್ ಕೇಬಲ್‌ನ ಬಂಡಲ್ ಸುತ್ತುವ ಚಕ್ರಕ್ಕೆ ಕಟ್ಟಲಾಗಿದೆ. ನಾಯಿ, ಬೆಕ್ಕಿನ ಮರಿಗಳನ್ನು ಕಾಡು ದಾರಿಯಲ್ಲಿ ಬಿಟ್ಟು ಹೋಗುವವರನ್ನು ಉಲ್ಲೇಖಿಸಿ ಈ ಬರಹ ಬರೆಯಲಾಗಿದೆ ಎಂದು ತಿಳಿದು ಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net