

ಪಿರಿಯಾಪಟ್ಟಣ: ತಾಲೂಕಿನ ವಿವಿಧೆಡೆ ಮುಸ್ಲಿಮರು ಬಕ್ರೀದ್ ಅನ್ನು ಶನಿವಾರ ಸಡಗರ ಸಂಭ್ರಮದಿಂದ ಆಚರಿಸಿದರು.
ಮುಸ್ಲಿಮರು ತಮ್ಮ ಮಕ್ಕಳೊಂದಿಗೆ ಹೊಸ ಬಟ್ಟೆ ಧರಿಸಿ ಸಮೀಪದ ಮಸೀದಿಗಳು ಹಾಗೂ ಈದ್ಗಾ ಮೈದಾನಗಳಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪ್ರಾರ್ಥನೆಯ ನಂತರ ಅಲಿಂಗಿಸಿ ಶುಭಾಶಯ ಕೋರಿದರು.
ಪಟ್ಟಣದ ಗೋಣಿಕೊಪ್ಪ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದರು. ಪಿರಿಯಾಪಟ್ಟಣದ ಜಾಮಿಯ ಮಸೀದಿಯ ಖತೀಬ್ ಅಫೀಜ್ ಜಲೀಲ್ ಸಾಬ್ ನೇತೃತ್ವದಲ್ಲಿ ಪ್ರಾರ್ಥನೆ ಮತ್ತು ಪ್ರವಚನ ನಡೆಯಿತು.
ಜಾಮಿಯ ಮಸೀದಿಯ ಅಧ್ಯಕ್ಷ ಅಬ್ದುಲ್ ಅಜೀಜ್, ಕಾರ್ಯದರ್ಶಿ ಮಹಮ್ಮದ್ ಶಫಿ ಮತ್ತು ಮುಖಂಡರು ಹಾಜರಿದ್ದರು.
ತಾಲೂಕಿನ ಹಲಗನಹಳ್ಳಿ, ಅರೇನಹಳ್ಳಿ, ಬೆಟ್ಟದಪುರ, ಪಂಚವಳ್ಳಿ, ಬೈಲಕುಪ್ಪೆ, ಕಂಪಲಾಪುರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬಕ್ರೀದ್ ಆಚರಿಸಲಾಯಿತು.