

ಚಿಕ್ಕಮಗಳೂರು: ಮುಸ್ಲಿಮರಲ್ಲಿನ ಅಸಹಿಷ್ಣತೆಯೇ ಭಯೋತ್ಪಾದನೆಗೆ ಕಾರಣ. ಇಸ್ಲಾಂ ತನ್ನ ಮೂಲ ಸ್ವರೂಪ ಬದಲಿಸಿಕೊಳ್ಳಬೇಕು. ಅದರಲ್ಲಿರುವ ಅಸಹಿಷ್ಣತೆ ಇಂದಿನ ಕಾಲಕ್ಕೆ ಸೂಕ್ತವಲ್ಲ. ೧೪೦೦ ವರ್ಷಗಳ ಹಿಂದಿನ ಬರ್ಬರತೆಯನ್ನೇ ಇಂದಿಗೂ ಅಳವಡಿಸಿಕೊಳ್ಳುವುದು ಜಗತ್ತಿಗೆ ಹಾಗೂ ಮುಸ್ಲಿಂ ಸಮುದಾಯಕ್ಕೂ ಒಳ್ಳೆಯದಲ್ಲ. ಭಯೋತ್ಪಾದಕರು ಎಂದರೆ ಬಹು ದೊಡ್ಡ ಪಾಲು ಮುಸಲ್ಮಾನರು ಎಂಬುದನ್ನು ಆ ಸಮುದಾಯ ಚಿಂತನೆ ಮಾಡಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ತಿಳಿಸಿದರು.
ತಾಲೂಕಿನ ದತ್ತಪೀಠದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ೩೩೩ ಕೋಟಿ ದೇವತೆಗಳಿವೆ. ನಾವೆಲ್ಲ ದೇವನೊಬ್ಬ ನಾಮ ಹಲವು ಎಂಬ ತತ್ವದ ಮೇಲೆ ನಂಬಿಕೆ ಇಟ್ಟಿz್ದೆÃವೆ. ಹೆಚ್ಚು ಎಂದರೆ ನಮ್ಮಲ್ಲಿ ಜಗಳ ನಡೆಯಬಹುದು. ಅದನ್ನು ಮೀರಿದ ಭಯೋತ್ಪಾದನೆ ನಮ್ಮಲ್ಲಿಲ್ಲ. ಮುಸಲ್ಮಾನರು ಇರುವ ಕಡೆ ಒಬ್ಬನೇ ದೇವರು, ಒಬ್ಬನೇ ಪ್ರವಾದಿ. ಆದರೂ ಒಬ್ಬರನ್ನು ಒಬ್ಬರು ಬಾಂಬ್ ಹಾಕಿ ಕೊಲ್ಲುತ್ತಾರೆ. ಏಕೆ ಹೀಗೆ ಎಂದು ಆ ಸಮುದಾಯದ ವಿದ್ವಾಂಸರು ಕೂತು ಆಲೋಚಿಸಬೇಕಿದೆ ಎಂದು ಸಲಹೆ ನೀಡಿದರು.
ಈ ಕಾಲದಲ್ಲಿಯೂ ಮುಸ್ಲಿಮರಲ್ಲಿ ಅಸಹಿಷ್ಣತೆ ಮನೋಭಾವನೆ ಇದೆ. ಮುಸ್ಲಿಂ ಹೊರತಾಗಿ ಉಳಿದಲ್ಲವೂ ಸುಳ್ಳು ಎಂಬ ಮನೋಭಾವವೇ ಅಸಹಿಷ್ಣುತೆಗೆ ಕಾರಣವಾಗುತ್ತಿದೆ. ಈ ಕಾರಣದಿಂದಲೇ ಜಗತ್ತಿನಲ್ಲಿ ಕ್ಷೋಬೆ ಉಂಟಾಗಿದೆ ಎಂದು ಹೇಳಿದರು.
ಇಂದು ಎಲ್ಲಾ ಧರ್ಮ ಗ್ರಂಥಗಳನ್ನು ಚರ್ಚೆಗೆ ಒಳಪಡಿಸಬೇಕಾದ ಅನಿವಾರ್ಯತೆ ಇದೆ. ಭಗವದ್ಗೀತೆ, ವೇದ, ಉಪನಿಷತ್ತು, ವಚನಗಳು, ಕುರಾನ್, ಬೈಬಲ್ ಗಳನ್ನು ಚರ್ಚೆಗೆ ಒಳಪಡಿಸಿ ಮಾನವ ಕುಲಕ್ಕೆ ಹಾಗೂ ಜಗತ್ತಿಗೆ ಹಿತಕಾರಿಯಾದ ಅಂಶಗಳನ್ನು ಅಷ್ಟೇ ಧರ್ಮ ಗ್ರಂಥಗಳಲ್ಲಿ ಉಳಿಸಿಕೊಳ್ಳಬೇಕು. ಮಾನವ ಕುಲಕ್ಕೆ ಹಿತಕಾರಿಯಲ್ಲದ ಅಂಶಗಳು ಕ್ಷೋಭೆ, ಭಯೋತ್ಪಾದನೆ ನಿರ್ಮಾಣ ಮಾಡಿ ನೆಮ್ಮದಿ ಹಾಳು ಮಾಡುತ್ತವೆ. ಇಂಥ ಅಂಶಗಳನ್ನು ಧರ್ಮ ಗ್ರಂಥಗಳಿAದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.
ಭಯೋತ್ಪಾದಕರಿಗೆ ಮೂಲ ಪ್ರೇರಣೆಯೇ ಕುರಾನ್‌ನಲ್ಲಿರುವ ಅಸಹಿಷ್ಣತೆ. ಆ ಅಸಹಿಷ್ಣುತೆಯಿಂದಲೇ ಭಯೋತ್ಪಾದನೆ ತಲೆಯೆತ್ತುತ್ತಿದೆ. ಇದರಿಂದ ಜಗತ್ತಿನ ಶಾಂತಿ ಹಾಗೂ ನೆಮ್ಮದಿಗೆ ಧಕ್ಕೆಯಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖಾಲಿ ಜಾಗದಲ್ಲಿ ಎಷ್ಟೇ ದೊಡ್ಡದಾದ ಮಸೀದಿಯನ್ನಾದರೂ ಕಟ್ಟಲಿ. ಕೇಳಿದಲ್ಲಿ ಅದಕ್ಕೆ ನಾವೇ ಜಾಗವನ್ನು ದಾನ ಕೊಡುತ್ತೇವೆ. ಆದರೆ ದೇವಸ್ಥಾನಗಳನ್ನು ಒಡೆದು ಮಸೀದಿ ಏಕೆ ಕಟ್ಟಬೇಕು ಎಂದು ಪ್ರಶ್ನಿಸಿದ ಅವರು, ದೇವಸ್ಥಾನ ಒಡೆದು ಕಟ್ಟಿರುವ ಮಸೀದಿಗಳನ್ನು ಬಿಡಲೇಬೇಕು ಎಂದು ಒತ್ತಾಯಿಸಿದರು.
ಎಚ್ಚೆತ್ತಿರುವ ಹಿಂದು ಇಂದು ಪ್ರತಿಯೊಂದು ಲೆಕ್ಕ ಕೇಳುತ್ತಿದ್ದಾನೆ. ಇಂದೋ ನಾಳೆಯೋ ದೇವಸ್ಥಾನಗಳನ್ನು ಒಡೆದು ಕಟ್ಟಿರುವ ಮಸೀದಿಗಳನ್ನು ನೀವಾಗಿಯೇ ಬಿಟ್ಟರೆ ಒಳ್ಳೆಯದು. ಇಲ್ಲದಿದ್ದರೆ ನಾವೇ ಬಿಡಿಸಿಕೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದರು.
ದತ್ತ ಜಯಂತಿ ಅಂಗವಾಗಿ ಶುಕ್ರವಾರ ಚಿಕ್ಕಮಗಳೂರಿನಲ್ಲಿ ನಡೆದ ಶುಭ ಯಾತ್ರೆ ಒಂದು ರೀತಿ ಭಕ್ತಿ, ಭಾವ, ಶಕ್ತಿಯ ಸಂಗಮದAತಿತ್ತು. ಶನಿವಾರ ಬೆಳಗ್ಗೆ ೬ ಗಂಟೆಯಿAದಲೇ ಚಿಕ್ಕಮಗಳೂರು ಜಿಲ್ಲೆ ಮತ್ತು ರಾಜ್ಯದ ವಿವಿಧ ಭಾಗಗಳಿಂದ ದತ್ತಮಾಲಾಧಾರಿಗಳು ದತ್ತಪೀಠಕ್ಕೆ ಬಂದು ದತ್ತ ಪಾದುಕ್ಕೆ ದರ್ಶನ ಪಡೆದಿದ್ದಾರೆ. ದತ್ತಪೀಠದಲ್ಲಿ ಶ್ರೀ ದತ್ತಾತ್ರೇಯ ಹೋಮ, ಗಣ ಹೋಮ ಬೆಳಗ್ಗಿನಿಂದಲೇ ಸಾಂಗೋಪಸAಗವಾಗಿ ನಡೆದಿವೆ ಎಂದು ಮಾಹಿತಿ ನೀಡಿದರು.