ಮುಸ್ಲಿಂರ ಸಂತೃಪ್ತಿಯಲ್ಲಿ ಶಿವಾನಂದ ಪಾಟೀಲ

KS Eshwarappa, Former Deputy Chief Minister of Karnataka
ಮಾಜಿ ಡಿಸಿಎಂ ಈಶ್ವರಪ್ಪ
Published on

ಬಾಗಲಕೋಟೆ: ರಾಜ್ಯದಲ್ಲಿ ಮುಸ್ಲಿಂರನ್ನು ಸಂತೃಪ್ತಿ ಪಡಿಸುವ ರೇಸ್ ನಲ್ಲಿ ಜಮೀರ್ ಅಹ್ಮದ್ ಮೊದಲ ಸ್ಥಾನದಲ್ಲಿ ಇದ್ದರೆ ಸಚಿವ ಶಿವಾನಂದ ಪಾಟೀಲ ೨ನೇ ಸ್ಥಾನದಲ್ಲಿ ಇದ್ದಾರೆ ಎಂದು ಈಶ್ವರಕ್ಕ ಆಕ್ರೋಶ ಹೊರಹಾಕಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ಮುಸ್ಲಿಂ ರಾಜರು ಹಿಂದುಗಳ ಮಠ ಮಾನ್ಯಗಳಿಗೆ ಜಮೀನು ದಾನ ಮಾಡಿದ್ದರು ಎಂದಿದ್ದ ಸಚಿವ ಶಿವಾನಂದ ಪಾಟೀಲ ಹೇಳಿಕೆಗೆ ಗರಂ ಆದ ಈಶ್ವರಪ್ಪ, ಈ ದೇಶಕ್ಕೆ ಮುಸ್ಲಿಂರು ಯಾವಾಗ ಬಂದಿದ್ದು? ಮಂತ್ರಿಯಾಗಿ ಇವರಿಗೆ ಚರಿತ್ರೆಯೇ ಗೊತ್ತಿಲ್ಲ ಎಂದು ಕಿಡಿಕಾರಿದರು.

ಇದು ಸಾಧು ಸಂತರ ನಾಡು. ಭಾರತೀಯ ಸಂಸ್ಕೃತಿ. ಇಲ್ಲಿಗೆ ಮುಸ್ಲಿಂರು ಆಕ್ರಮಣಕಾರಿಗಳು. ಇಲ್ಲಿನ ಆಸ್ತಿ ಪಾಸ್ತಿ ಲೂಟಿ ಮಾಡಿ, ಮಹಿಳೆಯರನ್ನು ಮತಾಂತರ ಮಾಡಿ, ಗೋವುಗಳನ್ನು ಕಡಿದು ರಾಜ್ಯಭಾರ ಮಾಡಿದವರು. ಅವರೇನು ನಮಗೆ ಕೊಡುವುದು? ನಮ್ಮ ಭೂಮಿಯನ್ನು ಯಾವನೂ ಕೊಡುವುದಿಲ್ಲ. ಇದು ನಮ್ಮದು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net