

ಹಾಸನ : ಮುಸಲ್ಮಾನರ 2ಬಿ ಮೀಸಲಾತಿ ರದ್ದುಪಟಿಸಿರುವುದನ್ನು ಪರಿಶೀಲಿಸಲು ಮತ್ತು ಮುಸ್ಲಿಂರ ಸದ್ಯದ ಸ್ಥಿತಿಗತಿಗಳ ಬಗ್ಗೆ ಹೊಸ ಆಯೋಗ ರಚನೆ ಮಾಡುವಂತೆ ಆಗ್ರಹಿಸಿ ಮುಸ್ಲಿಂ ಹಿತಾರಕ್ಷಣಾ ಮೀಸಲಾತಿ ಹೋರಾಟ ಸಮಿತಿಯಿಂದ ಶುಕ್ರವಾರ ಪ್ರತಿಭಟನೆ ನಡೆಸಿದರು
ಹಾಸನ ನಗರದ ಹೇಮಾವತಿ ಪ್ರತಿಮೆ ಬಳಿಯಿಂದ ಹೊರಟ ಪ್ರತಿಭಟನಾಕಾರರು ಸರಕಾರದ ವಿರುದ್ಧ ಘೋಷಣೆಕೂಗಿತ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಸಾವಿರಾರು ಜನರು ಬಿಜೆಪಿ ನಡೆಗೆ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿ ಎಂ.ಎಸ್, ಅರ್ಚನಾ ಅವರಿಗೆ ಮನವಿ ಸಲ್ಲಿಸಿದರು.
ಈ ಸಂಧರ್ಭದಲ್ಲಿ ಸಮಿತಿಯ ಸದಸ್ಯ ಸಮೀರ್ ಅಹಮದ್,ಮಾತನಾಡಿ, ಕರ್ನಾಟಕ ರಾಜ್ಯ ಸರ್ಕಾರ ಮಾರ್ಚ್ ತಿಂಗಳು 2023 ರಂದು ಸಚಿವ ಸಂಪುಟ ಸಭೆಯಲ್ಲಿ ಕರ್ನಾಟಕದ ಮುಸ್ಲಿಂ ಜನಾಂಗಕ್ಕೆ ನೀಡುತ್ತಿದ್ದ ಪ್ರವರ್ಗ2ಬಿ ಅಡಿಯಲ್ಲಿ ಶೇ.4 ರಷ್ಟು ಮೀಸಲಾತಿಯನ್ನು ರದ್ದುಗೊಳಿಸಿ ಮುಸ್ಲಿಂ ಸಮಾಜಕ್ಕೆ ಅನ್ಯಾಯ ಮಾಡಿರುವುದ್ದು ಖಂಡನೀಯ ಎಂದು ಕಿಡಿಕಾರಿದ್ದರು.
ಮುಸ್ಲಿಂ ಸಮುದಾಯಗಳಿಗೆ ಹಿಂದುಳಿದ ವರ್ಗಗಳ ಪ್ರವರ್ಗ 2ಬಿ ಅಡಿಯಲ್ಲಿ ನೀಡಿದ್ದ ಶೇಕಡ.4 ರಷ್ಟು ಮೀಸಲಾತಿಯನ್ನು ರಾಜ್ಯ ಬಿ.ಜೆ.ಪಿ. ಸರ್ಕಾರ ರದ್ದು ಪಡಿಸಿ ಆರ್ಥಿಕವಾಗಿ ಹಿಂದುಳಿದವರಿಗೆ (ಇ.ಡಬ್ಲೂ.ಎಸ್.) ಕಲ್ಪಿಸಿರುವ ಮೀಸಲಾತಿ ಅಡಿಯಲ್ಲಿ ಸೇರ್ಪೆಡೆ ಮಾಡಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ. ಸರ್ಕಾರ ಮುಸ್ಲಿಮರ ಅಧ್ಯಯನ ನಡೆಸಿದ ಜಯಪ್ರಕಾಶ್ ಹೆಗ್ಡೆ ಆಯೋಗದ ವರದಿ ಸಾರ್ವಜನಿಕವಾಗಿ ಬಹಿರಂಗ ಪಡಿಸದೆ ನಿರ್ಧಾರ ಕೈಗೊಂಡಿರುವುದು ಖಂಡನೀಯ ಎಂದರು.
ಹಿಜಾಬ್ ಗೋಹತ್ಯೆ ನಿಷೇಧ, ಧಾರ್ಮಿಕ ಸ್ಥಳಗಳ ಮೇಲೆ ದಾಳಿ ಜಟ್ಟ ಕಟ್ ಅಲಾಲ್ ಕಟ್ ಹೀಗೆ ಹಲವು ರೀತಿಯ ಮುಸ್ಲಿಂ ವಿರೋಧಿ ನಿಲುವುಗಳ ಮುಂದುವರಿದ ಭಾಗವಾಗಿ ನಮ್ಮ ಹಕ್ಕು ಕಸಿದುಕೊಂಡಿದ್ದಾರೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಮುಸ್ಲಿಂ ಹಿತಾರಕ್ಷಣಾ ಮೀಸಲಾತಿ ಹೋರಾಟ ಸಮಿತಿಯ ಮಾಜಿ ನಗರಸಭೆ ಸದಸ್ಯ ಸಯ್ಯದ್ ಅಕ್ಬರ್, ರಫೀಕ್, ಅಕ್ರಂ ಪಾಷಾ, ನವೀದ್ ಅಹಮದ್, ಅಂಶದ್, ಫೈರೋಜ್ ಪಾಷ, ಸೂಫಿ ಇತರರು ಉಪಸ್ಥಿತರಿದ್ದರು.