

ಕೊಡಗು: ಜಿಲ್ಲಾ ಮುಸ್ಲಿಂ ಸ್ಪೋರ್ಟ್ಸ್ ಟ್ರಸ್ಟ್‌ನ ಮಾಸಿಕ ಸಭೆ ಅಧ್ಯಕ್ಷ ಎ.ಅಬ್ದುಲ್ ಖಾದರ್ ಹಾಕತ್ತೂರು ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಮಡಿಕೇರಿ ಖಾಸಗಿ ಹೋಟೆಲ್‌ನ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ 20ನೇ ವರ್ಷದ ಕೊಡಗು ಮುಸ್ಲಿಂ ಕಪ್ ಕ್ರಿಕೆಟ್ ಪಂದ್ಯಾವಳಿ ಹಾಗೂ ಪ್ರಥಮ ವರ್ಷದ ಕೊಡಗು ಮುಸ್ಲಿಂ ಕಪ್ ಹಗ್ಗಜಗ್ಗಾಟವನ್ನು ಟ್ರಸ್ಟ್‌ನ ವತಿಯಿಂದ ನಡೆಸಲು ನಿರ್ಧರಿಸಲಾಯಿತು.
ಈ ಸಂದರ್ಭ ಮಾತನಾಡಿದ ಟ್ರಸ್ಟ್‌ನ ಗೌರವಾಧ್ಯಕ್ಷ ಅಬ್ದುಲ್ ರಶೀದ್ ಕುಪ್ಪೊಡಂಡ, ಮುಂದಿನ ದಿನಗಳಲ್ಲಿ ಕ್ರಿಕೆಟ್ ಮಾತ್ರವಲ್ಲದೆ ಕೊಡಗಿನ ಕ್ರೀಡೆಯಾದ ಹಾಕಿ ಮತ್ತಿತರ ಕ್ರೀಡೆಗಳನ್ನು ಆಯೋಜಿಸಬೇಕೆಂದು ಸಲಹೆ ನೀಡಿದರು. ಇದಕ್ಕೆ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ಸಭೆಯಲ್ಲಿ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಎಸ್.ಆದಂ ಕುಶಾಲನಗರ, ಸದಸ್ಯರಾದ ಕೆ.ಎಂ.ಮುಜೀಬ್ ಮೂರ್ನಾಡು, ಪಿ.ಎಚ್.ಸಮೀರ್ ಕಡಂಗ, ಎಂ.ಕೆ.ಅಬ್ದುಲ್ ರಜಾಕ್ ಯಡಪಾಲ, ಎನ್.ಪಿ.ಹ್ಯಾರಿಸ್ ಮಡಿಕೇರಿ, ನಿರ್ದೇಶಕ ಎಂ.ಎಂ.ಹ್ಯಾರಿಸ್ ನಂಜರಾಯಪಟ್ಟಣ ಮತ್ತಿತರರು ಉಪಸ್ಥಿತರಿದ್ದರು.